EBM News Kannada
Leading News Portal in Kannada

ಇಸ್ರೇಲ್ ಭದ್ರತಾ ಸಚಿವರ ಆಪ್ತ ಅಧಿಕಾರಿಗಳ ಬಂಧನ

0



ಜೆರುಸಲೇಂ: ಇಸ್ರೇಲ್‍ ನ ಕಟ್ಟಾ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್‍ಗ್ವಿರ್ ಅವರ ನಿಕಟ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಬಂಧೀಖಾನೆ ಅಧಿಕಾರಿ ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಲಂಚ, ಅಧಿಕಾರದ ದುರುಪಯೋಗ ಮತ್ತು ನಂಬಿಕೆಯ ಉಲ್ಲಂಘನೆ ಆರೋಪದಡಿ ಮೂವರು ಅಧಿಕಾರಿಗಳನ್ನು ಸೋಮವಾರ ಬಂಧಿಸಲಾಗಿದೆ. ಅಧಿಕಾರಿಗಳ ಬಂಧನವನ್ನು ಖಂಡಿಸಿರುವ ಸಚಿವ ಬೆನ್‍ಗ್ವಿರ್, ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು ತನ್ನನ್ನು ಪದಚ್ಯುತಗೊಳಿಸುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ನನ್ನ ಇಲಾಖೆಯಡಿ ಬರುವ ಮತ್ತು ನನ್ನ ಆದೇಶ, ಕಾರ್ಯನೀತಿಗಳನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸುವ ನಿರ್ಧಾರವು ರಾಜಕೀಯ ಪ್ರೇರಿತವಾಗಿದ್ದು, ಇದು ನನ್ನ, ಸರಕಾರದ ಮತ್ತು ಪ್ರಧಾನಿಯ ಪದಚ್ಯುತಿಗೆ ನಡೆಸಿರುವ ಪ್ರಯತ್ನವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಟಾರ್ನಿ ಜನರಲ್ ಬಹರಾವ್ ಮಿಯಾರಾ ಬಲಪಂಥೀಯ ಸರಕಾರದ ಕಾರ್ಯನಿರ್ವಹಣೆಗೆ ತೊಡಕಾಗಿದ್ದು ಅವರನ್ನು ತಕ್ಷಣ ಪದಚ್ಯುತಗೊಳಿಸುವಂತೆ ಪ್ರಧಾನಿಯನ್ನು ಆಗ್ರಹಿಸಿದ್ದಾರೆ.

Leave A Reply

Your email address will not be published.