ಸನಾ : ಯೆಮನ್ ಮೂಲದ ಹೌದಿ ಸಶಸ್ತ್ರ ಹೋರಾಟಗಾರರ ಗುಂಪು ಮಧ್ಯ ಇಸ್ರೇಲ್‍ನತ್ತ ಹೈಪರ್‍ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ಹೌದಿಗಳ ವಕ್ತಾರ ಯಾಹ್ಯಾ ಸರಿಯಾ ರವಿವಾರ ಹೇಳಿದ್ದಾರೆ.
ಯೆಮನ್ ಕಡೆಯಿಂದ ರವಿವಾರ ಕ್ಷಿಪಣಿ ಹಾರಿ ಬರುತ್ತಿದ್ದಂತೆಯೇ ಮಧ್ಯ ಇಸ್ರೇಲ್‍ನ ಹಲವೆಡೆ ಸೈರನ್‍ಗಳನ್ನು ಮೊಳಗಿಸಲಾಗಿದೆ. ಕ್ಷಿಪಣಿ ಇಸ್ರೇಲ್ ಪ್ರದೇಶದೊಳಗೆ ಪ್ರವೇಶಿಸುವ ಮುನ್ನವೇ ಅದನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.