EBM News Kannada
Leading News Portal in Kannada

ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತ್ಯು | Gaza

0


ಗಾಝಾ : ಗಾಝಾ ಪಟ್ಟಿಯ ಮೇಲೆ ಬುಧವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ರಕ್ಷಣಾ ಕಾರ್ಯಕರ್ತನ ಸಹಿತ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಇತರ 10 ಮಂದಿ ನಾಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆ ಹೇಳಿದೆ.

ಇಸ್ರೇಲ್ ಟ್ಯಾಂಕ್‍ಗಳು ಕಾರ್ಯಾಚರಣೆ ತೀವ್ರಗೊಳಿಸಿದ್ದು ಹಲವು ಮನೆಗಳನ್ನು ಧ್ವಂಸಗೊಳಿಸಿದ್ದು ಕನಿಷ್ಠ 10 ಮಂದಿ ನಾಪತ್ತೆಯಾಗಿದ್ದಾರೆ. ಜಬಲಿಯಾ ಪ್ರದೇಶದಲ್ಲಿ ಮನೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರೆ, ಮನೆಯ ಸಮೀಪದಲ್ಲಿ ಟ್ಯಾಂಕ್ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದಾನೆ. ಗಾಝಾ ನಗರದ ಹೊರವಲಯದಲ್ಲಿರುವ ಸಬ್ರಾದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಫೆಲೆಸ್ತೀನ್‍ನ ನಾಗರಿಕ ತುರ್ತು ಸೇವಾ ತಂಡವನ್ನು ಗುರಿಯಾಗಿಸಿ ನಡೆದ ಕ್ಷಿಪಣಿ ದಾಳಿಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ದಕ್ಷಿಣ ಗಾಝಾ ಪಟ್ಟಿಯ ರಫಾ ನಗರದ ಪೂರ್ವ ಭಾಗದಲ್ಲಿ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಒಬ್ಬ ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಜಬಲಿಯಾ, ಬೈತ್ ಲಾಹಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಸ್ರೇಲ್ ಸೇನೆ ಸುಮಾರು ಹದಿನೈದು ಮನೆಗಳನ್ನು ನೆಲಸಮಗೊಳಿಸಿದೆ. ಉತ್ತರ ಗಾಝಾ ಪ್ರದೇಶಗಳಲ್ಲಿ ಆರೋಗ್ಯ ಸುರಕ್ಷಾ ವ್ಯವಸ್ಥೆ ಹದಗೆಟ್ಟಿದೆ. ಇಂಧನ ಮತ್ತು ಇತರ ಸಾಧನಗಳನ್ನು ಈ ಪ್ರದೇಶಕ್ಕೆ ಸಾಗಿಸಲು ಇಸ್ರೇಲ್ ಸೇನೆ ಅನುಮತಿ ನಿರಾಕರಿಸುತ್ತಿರುವುದರಿಂದ ಔಷಧ ಹಾಗೂ ಇತರ ಅಗತ್ಯ ವಸ್ತುಗಳ ಕೊರತೆಯಿದೆ. ಉತ್ತರ ಗಾಝಾದಲ್ಲಿ ಮೂರು ಆಸ್ಪತ್ರೆಗಳು ತೀವ್ರ ಸವಾಲಿನ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಪ್ರದೇಶಕ್ಕೆ ಆಂಬ್ಯುಲೆನ್ಸ್ ಗಳು ಪ್ರವೇಶಿಸುವುದಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಆಹಾರ ಮತ್ತು ನೀರಿನ ಕೊರತೆ ತೀವ್ರಗೊಂಡಿದೆ. 45 ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು ಬದಲಿ ತಂಡಕ್ಕೆ ಪ್ರವೇಶ ನಿರಾಕರಿಸಿರುವುದರಿಂದ ಹಲವು ಗಾಯಾಳುಗಳು ಚಿಕಿತ್ಸೆ ದೊರಕದೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಉತ್ತರ ಗಾಝಾ ಪಟ್ಟಿಯಲ್ಲಿರುವ ಕಮಲ್ ಅದ್ವಾನ್ ಆಸ್ಪತ್ರೆಯ ನಿರ್ದೇಶಕರನ್ನು ಉಲ್ಲೇಖಿಸಿದ ವರದಿ ಹೇಳಿದೆ.

Leave A Reply

Your email address will not be published.