ಬೈರುತ್ : ಇಸ್ರೇಲ್ ರವಿವಾರ ಬೆಳಿಗ್ಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ದಕ್ಷಿಣ ಲೆಬನಾನ್‍ನ ಕಫರ್ ಟಿಬ್ನಿಟ್ ಗ್ರಾಮದ ಮಸೀದಿಯೊಂದು ಸಂಪೂರ್ಣ ನಾಶಗೊಂಡಿರುವುದಾಗಿ ಲೆಬನಾನ್‍ನ ಸರಕಾರಿ ಸ್ವಾಮ್ಯದ `ನ್ಯಾಷನಲ್ ನ್ಯೂಸ್ ಏಜೆನ್ಸಿ’ ವರದಿ ಮಾಡಿದೆ.
ಕನಿಷ್ಠ 100 ವರ್ಷ ಪುರಾತನ ಮಸೀದಿಯು ಶತ್ರುಗಳ ದಾಳಿಯಲ್ಲಿ ನಾಶಗೊಂಡಿದೆ ಎಂದು ನಗರದ ಮೇಯರ್ ಫೌದ್ ಯಾಸಿನ್ ಹೇಳಿದ್ದಾರೆ.
ದಕ್ಷಿಣ ಲೆಬನಾನ್‍ನ ರಮ್ಯೆಹ್ ಗ್ರಾಮಕ್ಕೆ ನುಗ್ಗುವ ಇಸ್ರೇಲ್ ಪಡೆಯ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಹಿಜ್ಬುಲ್ಲಾ ಹೇಳಿದೆ. ಈ ಮಧ್ಯೆ, ಲೆಬನಾನ್‍ನ ಸಿರ್ಬಿನ್ ನಗರದಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯ ಕಾರ್ಯಕ್ಕೆ ಕೈಜೋಡಿಸಿದ್ದ ಲೆಬನಾನ್ ರೆಡ್‍ಕ್ರಾಸ್ ಸಂಸ್ಥೆಯ ಆಂಬ್ಯುಲೆನ್ಸ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವು ಸಿಬ್ಬಂದಿ ಗಾಯಗೊಂಡಿರುವುದಾಗಿ ರೆಡ್‍ಕ್ರಾಸ್ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.