ಬೈರೂತ್ : ಲೆಬನಾನ್ನಲ್ಲಿ ಇಸ್ರೇಲ್ ತನ್ನ ಆಕ್ರಮಣವನ್ನು ವಿಸ್ತರಿಸಿದ್ದರೆ, ಗಾಝಾದಲ್ಲಿ ನಡೆಯುತ್ತಿರುವ ಜನಾಂಗೀಯ ನರಮೇಧಕ್ಕೆ ಬಲಿಯಾದವರ ಸಂಖ್ಯೆ 42 ಸಾವಿರವನ್ನು ದಾಟಿದೆ. ಈ ಮಧ್ಯೆ ದಕ್ಷಿಣ ಲೆಬನಾನ್ನಲ್ಲಿ ಇಸ್ರೇಲ್, ಇನ್ನೊಂದು ಸೇನಾ ತುಕಡಿಯನ್ನು ನಿಯೋಜಿಸಿರುವುದಾಗಿ ತಿಳಿದುಬಂದಿದೆ. ಬೈರೂತ್ನಲ್ಲಿರುವ ಹಿಜ್ಬುಲ್ಲಾ ನೆಲೆಗಳೆಂದು ಹೇಳಲಾದ ಪ್ರದೇಶಗಳಲ್ಲಿ ಅದು ವ್ಯಾಪಕವಾಗಿ ವಾಯುದಾಳಿಗಳನ್ನು ನಡಸಿದೆ.
ಸಿರಿಯ ರಾಜಧಾನಿ ಡಮಾಸ್ಕಸ್ನಲ್ಲಿರುವ ಇರಾನ್ ರಾಯಬಾರಿ ಕಟೇರಿ ಸಮೀಪವೇ ಇಸ್ರೇಲ್ ವಾಯುದಾಳಿಗಳನ್ನು ನಡೆಸಿದೆ. ಇಸ್ರೇಲ್ ದಾಳಿಯಿಂದಾಗಿ ಈವರೆಗೆ ಲೆಬನಾನ್ನಲ್ಲಿ 1200ಕ್ಕೂ ಅಧಿಕ ಮಂದಿ ಸಾವನ್ನಪ್ರಪಿದ್ದಾರೆ ಹಾಗೂ ಕನಿಷ್ಠ 8 ಸಾವಿರ ಮಂದಿ ಗಾಯಗೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.
ಕಳೆದ ತಿಂಗಳಿನಿಂದ ಇಸ್ರೇಲ್ ದಾಳಿಯ ಬಳಿಕ ಲೆಬನಾನ್ನಲ್ಲಿ ಭುಗಿಲ್ದೆ ಸಂಘರ್ಷದಿಂದಾಗಿ ಈವರೆಗೆ 10.20 ಲಕ್ಷ ಜನರು ನಿರ್ವಸಿತರಾಗಿದ್ದಾರೆ. ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಯನ್ನು ವಿಸ್ತರಿಸುತ್ತಿದ್ದು, ಲೆಬನಾನ್ನಲ್ಲಿ ಮಾನವೀಯ ಬಿಕ್ಕಟ್ಟು ಬಿಗಡಾಯಿಸಿದೆ ಎಂದು ವರದಿಗಳು ತಿಳಿಸಿವೆ.