ಪೋರ್ಟ್ ಔ ಪ್ರಿನ್ಸ್ : ಹೈಟಿಯ ಸಶಸ್ತ್ರ ಗ್ಯಾಂಗ್ ಗಳು ನಿರಂತರವಾಗಿ ಮಕ್ಕಳನ್ನು ತಮ್ಮ ಸಶಸ್ತ್ರ ಗುಂಪಿಗೆ ನೇಮಕ ಮಾಡಿಕೊಳ್ಳುತ್ತಿವೆ. ಬರಗಾಲದ ಸ್ಥಿತಿಯು ಬಾಲಕರನ್ನು ಬಂದೂಕು ಕೈಗೆತ್ತಿಕೊಳ್ಳಲು ಪ್ರಚೋದಿಸಿದರೆ ಹುಡುಗಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಮತ್ತು ಮನೆಗೆಲಸಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆ(HRW)ಯ ವರದಿ ಎಚ್ಚರಿಕೆ ನೀಡಿದೆ.
ಬಾಲ ಯೋಧರಾಗಿ ನೇಮಕಗೊಳ್ಳುತ್ತಿರುವ ಬಾಲಕರು ಹಸಿವಿನ ಸಂಕಟದಿಂದ ಪಾರಾಗಲು ಮತ್ತು ಆಶ್ರಯ ಮತ್ತು ಹಣಕ್ಕಾಗಿ ಅನಿವಾರ್ಯವಾಗಿ ಈ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಬಾಲ ಯೋಧರು ಬಂದೂಕು ತ್ಯಜಿಸಲು ಬಯಸುತ್ತಿದ್ದಾರೆ. ಆದರೆ ಗ್ಯಾಂಗ್ಗದಳು ಇದಕ್ಕೆ ಆಸ್ಪದ ನೀಡುತ್ತಿಲ್ಲ. ಬಾಲಕರನ್ನು ಹೆಚ್ಚಾಗಿ ಮಾಹಿತಿದಾರರಾಗಿ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಿ ಪೊಲೀಸರ ವಿರುದ್ಧ ನಡೆಯುವ ಘರ್ಷಣೆಗೆ ನಿಯೋಜಿಸಲಾಗುತ್ತಿದೆ. ರಸ್ತೆಗಳಲ್ಲಿ ದಿನ ಕಳೆಯುವ ಮಕ್ಕಳನ್ನು ಬಲವಂತವಾಗಿ ಕೊಂಡೊಯ್ದು ಅಪಾಯಕಾರಿ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹುಡುಗಿಯರು ಅತ್ಯಾಚಾರಕ್ಕೆ ಒಳಗಾಗುತ್ತಾರೆ ಮತ್ತು ಗ್ಯಾಂಗ್ನಕ ಸದಸ್ಯರಿಗೆ ಅಡುಗೆ ಮಾಡಲು, ಪಾತ್ರೆ ತೊಳೆಯಲು, ಸ್ವಚ್ಛ ಮಾಡಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಗರ್ಭಿಣಿಯಾದರೆ ಅವರನ್ನು ತಿರಸ್ಕರಿಸಲಾಗುತ್ತದೆ ಎಂದು ಮಾನವ ಹಕ್ಕುಗಳ ನಿಗಾ ಸಂಸ್ಥೆ (HRW) ಹೇಳಿದೆ.
ಹೈಟಿಯಲ್ಲಿ ರಾಜಕೀಯ ಬಿಕ್ಕಟ್ಟು ಹಾಗೂ ಹಣಕಾಸಿನ ಕೊರತೆಯಿಂದಾಗಿ ಸರಕಾರದ ಸಂಸ್ಥೆಗಳು ಬಹುತೇಕ ನಿಷ್ಕ್ರಿಯವಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಹೈಟಿಯ ಸಶಕ್ತ ಗ್ಯಾಂಗ್ಗ್ಳು ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುತ್ತಿವೆ. ಇದೀಗ ದೇಶದ ಸುಮಾರು 2.7 ದಶಲಕ್ಷ ಜನರು(ಇವರಲ್ಲಿ ಸುಮಾರು 5 ಲಕ್ಷದಷ್ಟು ಮಕ್ಕಳು) ವಾಸಿಸುತ್ತಿರುವ ಪ್ರದೇಶ ಗ್ಯಾಂಗ್ಗ ಳ ನಿಯಂತ್ರಣದಲ್ಲಿದೆ. ಮಕ್ಕಳು ದೊಡ್ಡವರಾಗುತ್ತಿದ್ದಂತೆಯೇ ಅವರನ್ನು ನೇಮಿಸಿಕೊಳ್ಳಲು ಗ್ಯಾಂಗ್ಗುಳ ಮಧ್ಯೆ ಪೈಪೋಟಿ ನಡೆಯುತ್ತದೆ. ಜನಪ್ರಿಯ ಸಾಮಾಜಿಕ ಮಾಧ್ಯಮ ಆ್ಯಪ್ಗುಳನ್ನು ಬಳಸಿ ನೇಮಕ ಮಾಡಿಕೊಳ್ಳಲಾಗುತ್ತದೆ . `ವಿಲೇಜ್ ಡಿ ಡಿಯು’ ಎಂಬ ಗ್ಯಾಂಗ್ನ ಮುಖಂಡ ರ್ಯಾ ಪ್ ಗಾಯಕನಾಗಿದ್ದು ತನ್ನ ಗುಂಪಿನ ಯೋಧರನ್ನು ವೈಭವೀಕರಿಸುವ ಮ್ಯೂಸಿಕ್ ವೀಡಿಯೊ ಪ್ರಸಾರ ಮಾಡುವ ಮೂಲಕ ಯುವಜನರನ್ನು ಆಕರ್ಷಿಸುತ್ತಾನೆ. ಈತನ ಗುಂಪಿನಲ್ಲಿ ಮಕ್ಕಳಿಗೆ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಲೆಂದೇ ವಿಶೇಷ ಘಟಕವೊಂದಿದೆ ಎಂದು ವರದಿ ಹೇಳಿದೆ.
ಗ್ಯಾಂಗ್ನ ಮೂರನೇ ಒಂದರಷ್ಟು ಸದಸ್ಯರು ಮಕ್ಕಳು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಕೊಲೆ ಮಾಡಲು, ಸಂಸ್ಥೆಗಳ ಮೇಲೆ ದಾಳಿ ನಡೆಸಲು ಮಕ್ಕಳನ್ನು ಬಳಸಲಾಗುತ್ತಿದೆ. ಹುಡುಗಿಯರನ್ನು ಶೋಷಣೆಯ ಲೈಂಗಿಕ ಸಂಬಂಧಗಳಿಗೆ ಬಲವಂತಪಡಿಸಲಾಗುತ್ತದೆ ಮತ್ತು ಇದಕ್ಕೆ ನಿರಾಕರಿಸಿದರೆ ಕೊಲ್ಲಲಾಗುತ್ತದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
► ವಿಶ್ವಸಂಸ್ಥೆಗೆ ಮನವಿ
ಕೆರಿಬಿಯನ್ ದ್ವೀಪರಾಷ್ಟ್ರವಾದ ಹೈಟಿಯ ಪೊಲೀಸರಿಗೆ ಗ್ಯಾಂಗ್ಗಸಳ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು ಭದ್ರತಾ ಕಾರ್ಯಾಚರಣೆಗಾಗಿ ವಿಶ್ವಸಂಸ್ಥೆಗೆ ಕಳೆದ ವರ್ಷ ಹೈಟಿ ಸರಕಾರ ಮನವಿ ಮಾಡಿತ್ತು. ಆದರೆ ಇದುವರೆಗೆ ವಿಶ್ವಸಂಸ್ಥೆ ಪೂರ್ಣ ಪ್ರಮಾಣದ ನಿಯೋಗವನ್ನು ನಿಯೋಜಿಸಿಲ್ಲ. ಭದ್ರತಾ ಪಡೆಗಳಿಗೆ ಹೆಚ್ಚು ಸಂಪನ್ಮೂಲ ಒದಗಿಸುವಂತೆ, ಮಕ್ಕಳಿಗೆ ಆಹಾರದ ಕೊರತೆಯಾಗದಂತೆ, ಶಾಲೆಗೆ ಹೋಗಲು ಅನುಕೂಲ ಮಾಡಿಕೊಡಬೇಕು ಮತ್ತು ಗ್ಯಾಂಗ್ಗ ಳನ್ನು ತ್ಯಜಿಸುವವರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಎಚ್ಆಕರ್ಡುಬ್ಲ್ಯೂ ಹೈಟಿ ಸರಕಾರ ಹಾಗೂ ಇತರ ದೇಶಗಳನ್ನು ಆಗ್ರಹಿಸಿದೆ.