ಅಬುಜಾ : ನೈಜೀರಿಯದ ಉತ್ತರ ನೈಜರ್ ರಾಜ್ಯದಲ್ಲಿ ಮಂಗಳವಾರ ಸಂಭವಿಸಿದ ದೋಣಿ ದುರಂತದಲ್ಲಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಜನರು ದೋಣಿಯಲ್ಲಿ ತಮ್ಮ ಊರಿಗೆ ವಾಪಾಸಾಗುತ್ತಿದ್ದಾಗ ದುರಂತ ಸಂಭವಿಸಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳೆಂದು ತಿಳಿದುಬಂದಿದೆ.
ದುರಂತಸಂಭವಿಸಿದಾಗ ದೋಣಿಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿಯಿದ್ದರು ಎನ್ನಲಾಗಿದೆ. ಅವರಲ್ಲಿ 160 ಮಂದಿಯನ್ನು ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ನೈಜೀರಿಯಾದಲ್ಲಿ ಬಹುತೇಕ ದೋಣಿ ದುರಂತಗಳು ಮಿತಿಮೀರಿದ ಪ್ರಯಾಣಿಕ ದಟ್ಟಣೆ, ಕಳಪೆ ನಿರ್ವಹಣೆ ಆಹಗೂ ಸುರಕ್ಷತಾ ಉಪಕರಣಗಳ ಕೊರತೆಯಿಂದಾಗಿ ಸಂಭವಿಸುತ್ತವೆ ಎಂದು ವರದಿಗಳು ತಿಳಿಸಿವೆ