EBM News Kannada
Leading News Portal in Kannada

ಡೆನ್ಮಾರ್ಕ್ | ಇಸ್ರೇಲ್ ರಾಯಭಾರ ಕಚೇರಿ ಬಳಿ 2 ಸ್ಫೋಟ | Denmark

0



ಕೋಪನ್‍ಹ್ಯಾಗನ್ : ಡೆನ್ಮಾರ್ಕ್ ರಾಜಧಾನಿ ಕೋಪನ್‍ಹ್ಯಾಗನ್‍ನ ಉತ್ತರ ಹೊರವಲಯದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಸಮೀಪ ಬುಧವಾರ ಎರಡು ಸ್ಫೋಟಗಳು ನಡೆದಿದ್ದು ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಯಾರೂ ಗಾಯಗೊಂಡಿಲ್ಲ. ಘಟನೆಯ ಸ್ಥಳದಲ್ಲಿ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದೆ. ಇಸ್ರೇಲ್ ರಾಯಭಾರ ಕಚೇರಿಯನ್ನು ಉದ್ದೇಶಿಸಿ ಸ್ಫೋಟ ನಡೆಸಿರುವ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

Leave A Reply

Your email address will not be published.