ಕೀನ್ಯಾ: ಭಾರತದ ಅದಾನಿ ಏರ್ಪೋರ್ಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಕೀನ್ಯಾ ಸರಕಾರದ ನಡುವಿನ 1.85 ಬಿಲಿಯನ್ ಮೌಲ್ಯದ ಒಪ್ಪಂದಕ್ಕೆ ಕೀನ್ಯಾದ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ ಎಂದು ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಿದೆ.
ಈ ಒಪ್ಪಂದದಲ್ಲಿ ಅದಾನಿಯ ಸಂಸ್ಥೆಗೆ ನೈರೋಬಿಯ ಜೊಮೊ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 30 ವರ್ಷಗಳವರೆಗೆ ನಿರ್ವಹಿಸಲು ಗುತಿಗೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿತ್ತು.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ನೈರೋಬಿಯ ಜೋಮೊ ಕೆನ್ಯಾಟ್ಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(ಜೆಕೆಐಎ) ಅದಾನಿ ವಿಮಾನ ನಿಲ್ದಾಣಕ್ಕೆ ಗುತ್ತಿಗೆ ನೀಡುವ ಕೀನ್ಯಾ ಸರ್ಕಾರದ ವಿರುದ್ಧ ನಿರ್ಧಾರದ ವಿರುದ್ಧ ಕಾನೂನು ತಕರಾರನ್ನು ಸಲ್ಲಿಸಲಾಗಿದೆ.
ಕೀನ್ಯಾ ಮಾನವ ಹಕ್ಕುಗಳ ಆಯೋಗ, ವಕೀಲರ ಸಂಘವು ಈ ಕ್ರಮವು ಅಸಂವಿಧಾನಿಕ ಎಂದು ವಾದಿಸಿದೆ. ಕೀನ್ಯಾದ ವಿಮಾನಯಾನ ಕಾರ್ಮಿಕರ ಒಕ್ಕೂಟವು ಕಳೆದ ತಿಂಗಳು ಈ ಬಗ್ಗೆ ಮುಷ್ಕರವನ್ನು ನಡೆಸಿತ್ತು. ಈ ನಿರ್ಧಾರದಿಂದ ಉದ್ಯೋಗ ಕಡಿತ ಉಂಟಾಗಲಿದೆ ಎಂದು ಕಳವಳವನ್ನು ಕೂಡ ವ್ಯಕ್ತಪಡಿಸಿತ್ತು.
ಪ್ರಕರಣದಲ್ಲಿ ಅರ್ಜಿದಾರರಾದ ಕೀನ್ಯಾದ ಲಾ ಸೊಸೈಟಿಯ ಅಧ್ಯಕ್ಷ ಫೇಯ್ತ್ ಒಡಿಯಾಂಬೊ ಈ ಒಪ್ಪಂದವು ಉದ್ಯೋಗ ನಷ್ಟಗಳಿಗೆ ಕಾರಣವಾಗುತ್ತದೆ ಮತ್ತು ಬೇರೆಯವರಿಗೆ ನಿರ್ವಹಣೆಗೆ ಅವಕಾಶ ಮಾಡಿಕೊಡುವುದರಿಂದ ದೇಶದಲ್ಲಿ ತೆರಿಗೆ ಕಟ್ಟುವ ಜನರ ಹಣಕ್ಕೆ ಯಾವುದೇ ಮೌಲ್ಯ ಇಲ್ಲದಂತಾಗುತ್ತದೆ ಎಂದು ವಾದಿಸಿದ್ದಾರೆ.