ಕೀವ್: ಸೈಬರ್ ಭದ್ರತೆ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಹಿರಿಯ ಅಧಿಕಾರಿಗಳನ್ನು ಸೋಮವಾರ ವಜಾಗೊಳಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ಸ್ಥಳೀಯ ಮಾಧ್ಯಮಗಳ ವರದಿ ಹೇಳಿದೆ.
ಸರಕಾರದ ಸೈಬರ್ ಭದ್ರತಾ ಸಂಸ್ಥೆಯಲ್ಲಿನ ಆಪಾದಿತ ದುರುಪಯೋಗದ ಬಗ್ಗೆ ಪ್ರಾಸಿಕ್ಯೂಟರ್ ತನಿಖೆ ಘೋಷಿಸಿದ ಹಿನ್ನೆಲೆಯಲ್ಲಿ ವಿಶೇಷ ಸಂವಹನ ಮತ್ತು ಮಾಹಿತಿ ಭದ್ರತೆ ವಿಭಾಗದ ಮುಖ್ಯಸ್ಥ ಯೂರಿ ಶಿಹಿಹೊಲ್ ಹಾಗೂ ಅವರ ಸಹಾಯಕ ಅಧಿಕಾರಿ ವಿಕ್ಟರ್ ಝೋರ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.