EBM News Kannada
Leading News Portal in Kannada

ಹಿರಿಯ ಜನರಲ್ ವಜಾ; ಯುದ್ಧದ ಸಿದ್ಧತೆಗಳಿಗೆ ಕರೆ ನೀಡಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ – Kannada News | North Korean leader Kim Jong Un dismisses the military’s top general Calls For War Preparations

0


ಮಿಲಿಟರಿಯ ಉನ್ನತ ಜನರಲ್, ಚೀಫ್ ಆಫ್ ಜನರಲ್ ಸ್ಟಾಫ್ ಪಾಕ್ ಸು ಇಲ್  ಸ್ಥಾನಕ್ಕೆ ಜನರಲ್ ರಿ ಯೋಂಗ್ ಗಿಲ್ ಅವರನ್ನು ಹೆಸರಿಸಲಾಗಿದೆ ಎಂದು  ಕೆಸಿಎನ್‌ಎ ವರದಿ ಮಾಡಿದೆ. ಜನರಲ್ ರಿ ಅವರು ರಕ್ಷಣಾ ಸಚಿವರಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಿಮ್ ಅವರು ಶಸ್ತ್ರಾಸ್ತ್ರ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಗುರಿಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.

ಹಿರಿಯ ಜನರಲ್ ವಜಾ; ಯುದ್ಧದ ಸಿದ್ಧತೆಗಳಿಗೆ ಕರೆ ನೀಡಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್

ಕಿಮ್ ಜಾಂಗ್ ಉನ್

ಸಿಯೋಲ್ ಆಗಸ್ಟ್ 10: ಉತ್ತರ ಕೊರಿಯಾದ (North Korea) ನಾಯಕ ಕಿಮ್ ಜಾಂಗ್ ಉನ್ (Kim Jong Un)ಅವರು ಮಿಲಿಟರಿಯ ಹಿರಿಯ ಜನರಲ್ ಅನ್ನು ವಜಾಗೊಳಿಸಿದ್ದು, ಯುದ್ಧದ ಸಾಧ್ಯತೆ, ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಉತ್ತೇಜನ ಮತ್ತು ಮಿಲಿಟರಿ ಡ್ರಿಲ್‌ಗಳ ವಿಸ್ತರಣೆಗೆ ಹೆಚ್ಚಿನ ಸಿದ್ಧತೆಗಳಿಗೆ ಕರೆ ನೀಡಿದ್ದಾರೆ ಎಂದು ರಾಜ್ಯ ಮಾಧ್ಯಮ ಕೆಸಿಎನ್‌ಎ(KCNA) ಗುರುವಾರ ವರದಿ ಮಾಡಿದೆ. ಉತ್ತರ ಕೊರಿಯಾದ ಶತ್ರುಗಳನ್ನು ತಡೆಯಲು ಪ್ರತಿಕ್ರಮಗಳ ಯೋಜನೆಗಳನ್ನು ಚರ್ಚಿಸಿದ ಕೇಂದ್ರೀಯ ಮಿಲಿಟರಿ ಆಯೋಗದ ಸಭೆಯಲ್ಲಿ ಕಿಮ್ ಈ ಹೇಳಿಕೆ ನೀಡಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಮೂಲವೊಂದು ಹೇಳಿರುವುದಾಗಿ ವರದಿ ಹೇಳಿದೆ.

ಮಿಲಿಟರಿಯ ಉನ್ನತ ಜನರಲ್, ಚೀಫ್ ಆಫ್ ಜನರಲ್ ಸ್ಟಾಫ್ ಪಾಕ್ ಸು ಇಲ್  ಸ್ಥಾನಕ್ಕೆ ಜನರಲ್ ರಿ ಯೋಂಗ್ ಗಿಲ್ ಅವರನ್ನು ಹೆಸರಿಸಲಾಗಿದೆ ಎಂದು  ಕೆಸಿಎನ್‌ಎ ವರದಿ ಮಾಡಿದೆ. ಜನರಲ್ ರಿ ಅವರು ರಕ್ಷಣಾ ಸಚಿವರಾಗಿ ತಮ್ಮ ಪಾತ್ರವನ್ನು ಉಳಿಸಿಕೊಳ್ಳುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಿಮ್ ಅವರು ಶಸ್ತ್ರಾಸ್ತ್ರ ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಗುರಿಯನ್ನು ಹೊಂದಿದ್ದಾರೆ ಎಂದು ವರದಿ ಹೇಳಿದೆ.

ಕಳೆದ ವಾರ ಅವರು ಶಸ್ತ್ರಾಸ್ತ್ರ ಕಾರ್ಖಾನೆಗಳಿಗೆ ಭೇಟಿ ನೀಡಿದ್ದು, ಅಲ್ಲಿ ಅವರು ಹೆಚ್ಚಿನ ಕ್ಷಿಪಣಿ ಎಂಜಿನ್, ಫಿರಂಗಿ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ನಿರ್ಮಿಸಲು ಕರೆ ನೀಡಿದ್ದಾರೆ.

ಕೆಸಿಎನ್‌ಎ ಬಿಡುಗಡೆ ಮಾಡಿದ ಫೋಟೋಗಳು ಕಿಮ್ ಸಿಯೋಲ್ ಮತ್ತು ದಕ್ಷಿಣ ಕೊರಿಯಾದ ರಾಜಧಾನಿ ಸುತ್ತಮುತ್ತಲಿನ ಪ್ರದೇಶಗಳನ್ನು ನಕ್ಷೆಯಲ್ಲಿ ತೋರಿಸಿದೆ. ಉಕ್ರೇನ್‌ನಲ್ಲಿ ತನ್ನ ಯುದ್ಧಕ್ಕಾಗಿ ಫಿರಂಗಿ ಶೆಲ್‌ಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಉತ್ತರ ಕೊರಿಯಾ ರಷ್ಯಾಕ್ಕೆ ಒದಗಿಸುತ್ತಿದೆ ಎಂದು ಯುನೈಟೆಡ್ ಸ್ಟೇಟ್ಸ್ ಆರೋಪಿಸಿದೆ. ಏತನ್ಮಧ್ಯೆ, ರಷ್ಯಾ ಮತ್ತು ಉತ್ತರ ಕೊರಿಯಾ ಈ ಆರೋಪಗಳನ್ನು ನಿರಾಕರಿಸಿವೆ.

ಯುದ್ಧಕ್ಕೆ ತನ್ನ ಪಡೆಗಳನ್ನು ಸಿದ್ಧವಾಗಿರಿಸಲು ದೇಶದ ಇತ್ತೀಚಿನ ಶಸ್ತ್ರಾಸ್ತ್ರಗಳು ಮತ್ತು ಸಲಕರಣೆಗಳೊಂದಿಗೆ ಮಿಲಿಟರಿ ಅಭ್ಯಾಸಗಳನ್ನು ನಡೆಸುವಂತೆಯೂ ಕಿಮ್ ಕರೆ ನೀಡಿದರು ಎಂದು ವರದಿ ತಿಳಿಸಿದೆ.

ಕೊರಿಯಾದ ಸ್ಥಾಪನಾ ದಿನದ 75 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಲುವಾಗಿ ಉತ್ತರ ಕೊರಿಯಾ ಸೆಪ್ಟೆಂಬರ್ 9 ರಂದು ಸೇನಾಪಡೆಯ ಮೆರವಣಿಗೆಯನ್ನು ಆಯೋಜಿಸಲು ಸಿದ್ಧವಾಗಿದೆ. ಉತ್ತರ ಕೊರಿಯಾ ಹಲವಾರು ಅರೆಸೈನಿಕ ಗುಂಪುಗಳನ್ನು ಹೊಂದಿದೆ. ಅದು ತನ್ನ ಮಿಲಿಟರಿ ಪಡೆಗಳನ್ನು ಬಲಪಡಿಸಲು ಬಳಸುತ್ತದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಆಗಸ್ಟ್ 21 ಮತ್ತು 24 ರ ನಡುವೆ ಮಿಲಿಟರಿ ಅಭ್ಯಾಸ ನಡೆಸಲು ನಿರ್ಧರಿಸಿದ್ದು, ಇದು ತನ್ನ ಭದ್ರತೆಗೆ ಅಪಾಯ ಎಂದು ಉತ್ತರ ಕೊರಿಯಾ ಭಾವಿಸಿದೆ.

ತಾಜಾ ಸುದ್ದಿ

Leave A Reply

Your email address will not be published.