EBM News Kannada
Leading News Portal in Kannada

ಆಸ್ಕರ್ ಪ್ರಶಸ್ತಿ ಗೆದ್ದ ಈ ಸಿನಿಮಾ ರಾಜಮೌಳಿಗೆ ಬೋರ್ ಹೊಡೆಸಿತಂತೆ!

0

ಕೊರೋನಾ ಲಾಕ್​ಡೌನ್​ ಅವಧಿಯಲ್ಲಿ ನಿರ್ದೇಶಕರು ಮನೆಯಲ್ಲಿ ಕುಳಿತು ಕಾಳ ಕಳೆಯುತ್ತಿದ್ದಾರೆ. ಇನ್ನು ಕೆಲವರು ಸಿನಿಮಾ ನೋಡುತ್ತಾ, ಸ್ಕ್ರಿಪ್ಟ್​ ಕೆಲಸಗಳನ್ನು, ಮನೆ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಂತೆ ಖ್ಯಾತ ನಿರ್ದೇಶಕ ರಾಜಮೌಳಿ ಬಿಡುವಿನ ವೇಳೆ ಈ ಬಾರಿ ಆಸ್ಕರ್​​ ಪ್ರಶಸ್ತಿ ಗೆದ್ದ ಸಿನಿಮಾವೊಂದನ್ನು ವೀಕ್ಷಿಸಿದ್ದಾರೆ. ಮಾತ್ರವಲ್ಲದೆ ಆ ಸಿನಿಮಾ ಬಗ್ಗೆ ತಮ್ಮ ಅಭಿಪಾಯ್ರವನ್ನು ತಿಳಿಸಿದ್ದಾರೆ.

ರಾಜಮೌಳಿ ಆಸ್ಕರ್​​ ‘ಪ್ಯಾರಾಸೈಟ್‘​ ಸಿನಿಮಾವನ್ನು ವೀಕ್ಷಿಸಿದ್ದಾರೆ. ಆದರೆ ಈ ಸಿನಿಮಾ ನನಗೆ ಮಾತ್ರ ಬೋರ್​ ಹೊಡೆಸಿತು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಸಿನಿಮಾ ನೋಡುತ್ತಾ ಇದ್ದ ಹಾಗೆಯೇ ನಿದ್ದೆಗೆ ಜಾರಿ ಬಿಟ್ಟೆ ಎಂದು ಹೇಳಿದ್ದಾರೆ.

‘ಪ್ಯಾರಾಸೈಟ್’​​ ಕೊರಿಯನ್​ ಭಾಷೆಯ ಸಿನಿಮಾವಾಗಿದೆ. ಬೋಂಗ್​ ಜೂನ್​ ಹೋ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ‘ಪ್ಯಾರಾಸೈಟ್’​​​​​ ಸಿನಿಮಾ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದರ ಜೊತೆಗೆ ಈ ಬಾರಿ ಆಸ್ಕರ್​ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅತ್ಯುತ್ತಮ ವಿದೇಶಿ ಚಿತ್ರ , ಆತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಚಿತ್ರಕತೆ, ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

Leave A Reply

Your email address will not be published.