EBM News Kannada
Leading News Portal in Kannada

ಕಪ್ಪೆಗಳ ಹೊಸ ಪ್ರಬೇಧ ಪತ್ತೆ: ಹವಾಮಾನ ಬದಲಾವಣೆ ಪರಿಣಾಮ ಅಧ್ಯಯನಕ್ಕೆ ಸಹಕಾರಿ

0

ಭುವನೇಶ್ವರ: ಶರೀರಶಾಸ್ತ್ರಜ್ಞರ ತಂಡವೊಂದು ಕಪ್ಪೆಯ ಎರಡು ಹೊಸ ಪ್ರಬೇಧಗಳನ್ನು ಕಂಡುಹಿಡಿದಿದ್ದು ಅವುಗಳಲ್ಲಿ ಒಂದು ಪೂರ್ವ ಘಟ್ಟ ಪ್ರದೇಶಗಳಿಗೆ ಮತ್ತೊಂದು ಪಶ್ಚಿಮ ಘಟ್ಟ ಪ್ರದೇಶಗಳಿಗೆ ಸೇರಿದ್ದಾಗಿದೆ. ಫೆಜರ್ವರ್ರಿಯಾ ಜಾತಿಗೆ ಸೇರಿದ ಕಪ್ಪೆಗಳು ಡಿಕ್ರೊಗ್ಲೋಸಿಡೆ ಕುಟುಂಬದ ಏಷ್ಯಾಪ್ರಾಂತ್ಯಕ್ಕೆ ಸೇರಿವೆ.

ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಫೆಜರ್ವಾರಾ ಕಳಿಂಗ ಮತ್ತು ಫೆಜರ್ವಾರಾ ಕೃಷ್ಣನ್ ಪ್ರಬೇಧದ ಕಪ್ಪೆಗಳು ಜಗತ್ತಿನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಆರೋಗ್ಯಕರ ಪರಿಸರ ವ್ಯವಸ್ಥೆಯನ್ನು ಸೂಚಿಸುತ್ತವೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಅಧ್ಯಯನಕ್ಕೆ ಸಹಕಾರಿಯಾಗುವ ಮಾದರಿಯಲ್ಲಿದೆ.

ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ವಿಐಐ), ಝೂಲಾಜಿಕಲ್ ಸರ್ವೇ ಆಫ್ ಇಂಡಿಯಾ (ಝಡ್ಯುಎಸ್) ಮತ್ತು ನಾರ್ತ್ ಒರಿಸ್ಸಾ ವಿಶ್ವವಿದ್ಯಾಲಯಗಳು ಕಪ್ಪೆಯನ್ನು ಕಂಡುಹಿಡಿದು ಕಳಿಂಗ ಪ್ರಬೇಧದ ಕಪ್ಪೆಗಳು ಚಳಿಗಾಲದಲ್ಲಿ ಮಾತ್ರ ಇರುತ್ತವೆ ಮತ್ತು ಮಳೆಗಾಲದಲ್ಲಿ ಇರುವುದಿಲ್ಲ ಎಂದು ಪತ್ತೆಹಚ್ಚಿದ್ದಾರೆ.
ಕಳಿಂಗ ಕಪ್ಪೆಗಳು ಮೊದಲು ಪೂರ್ವ ಘಟ್ಟಗಳ ಅನೇಕ ಸ್ಥಳಗಳಲ್ಲಿ ಪತ್ತೆಯಾಗಿವೆ ಮತ್ತು ಕೃಷ್ಣನ್ ಮಿಡತೆ ಕಪ್ಪೆಗಳು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜೋಗ್ ಜಲಪಾತದ ಹತ್ತಿರ ಸಿಕ್ಕಿವೆ.

ಪೂರ್ವ ಘಟ್ಟಗಳಲ್ಲಿ ಸಿಕ್ಕಿರುವ ಕಳಿಂಗ ಪ್ರಭೇದದ ಕಪ್ಪೆಗಳು ಸಿಮಿಲಿಪಾಲ್, ಸತ್ಕೋಸಿಯಾ, ಬರ್ಬರಾ ಮತ್ತು ಮಹೇಂದ್ರಗಿರಿ ಪರ್ವತ ಪ್ರದೇಶಗಳಲ್ಲಿ ಪತ್ತೆಯಾಗಿದ್ದು ಇದಕ್ಕೆ ಒಡಿಶಾ ಮತ್ತು ಆಂಧ್ರ ಪ್ರದೇಶದ ಭಾಗಗಳನ್ನು ಆಳಿದ ಕಳಿಂಗ ಸಾಮ್ರಾಜ್ಯದ ಹೆಸರನ್ನಿಡಲಾಗಿದೆ. ಜೋಗ್ ಜಲಪಾತದ ಹತ್ತಿರ ಸಿಕ್ಕಿರುವ ಇನ್ನೊಂದು ಕಪ್ಪೆ ಪ್ರಭೇದಕ್ಕೆ ಖ್ಯಾತ ಜೀವ ವಿಜ್ಞಾನಿ ದಿವಂಗತ ಕೆ ಸುಬ್ರಹ್ಮಣ್ಯಶಾಸ್ತ್ರಿ ಕೃಷ್ಣನ್ ಅವರ ಹೆಸರನ್ನಿಡಲಾಗಿದೆ.

Leave A Reply

Your email address will not be published.