EBM News Kannada
Leading News Portal in Kannada

ಯೂಟ್ಯೂಬ್​ನಲ್ಲಿ ಅಪ್ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಗೊತ್ತೇ?: ಇಲ್ಲಿದೆ ನೋಡಿ – Kannada News | Here are the first ever YouTube videos uploaded by Jawed Karim

0


YouTube First Video: ಇಂದು ನಾವು ನಿಮಗೆ ಯೂಟ್ಯೂಬ್ ಬಗ್ಗೆ ಆಸಕ್ತಿದಾಯಕ ವಿಷಯವೊಂದನ್ನು ಹೇಳಲಿದ್ದೇವೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಎಂದು ನೀವು ಯಾವಾಗದರೂ ಯೋಚಿಸಿದ್ದೀರಾ..?.

ಸ್ಟ್ರೀಮಿಂಗ್ ದೈತ್ಯ ಎಂದು ಕರೆಸಿಕೊಂಡಿರುವ ಯೂಟ್ಯೂಬ್ (Youtube) ಇಂದು ದೊಡ್ಡ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಜನರು ಉತ್ತಮ ಹಣ ಗಳಿಸುತ್ತಿದ್ದಾರೆ. ನಿಮ್ಮಲ್ಲಿ ಪ್ರತಿಭೆ ಇದ್ದರೆ ನೀವು ಪ್ರಪಂಚದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿದ್ದರೂ ಬೇಕಾದಷ್ಟು ಹಣವನ್ನು ಗಳಿಸಬಹುದು. ಗೂಗಲ್‌ನ (Google) ಈ ವಿಡಿಯೋ (Video) ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಜನರಿಗೆ ಗಳಿಕೆ, ಮನರಂಜನೆ, ಜ್ಞಾನ ಇತ್ಯಾದಿಗಳ ಸಾಧನವಾಗಿದೆ. ನೀವು ಏನನ್ನಾದರೂ ಹುಡುಕಲು ಅಥವಾ ತಿಳಿದುಕೊಳ್ಳಲು ಬಯಸಿದರೆ ಯೂಟ್ಯೂಬ್ ಸಹಾಯದಿಂದ ಕಲಿಯಬಹುದು.

ಇಂದು ನಾವು ನಿಮಗೆ ಯೂಟ್ಯೂಬ್ ಬಗ್ಗೆ ಆಸಕ್ತಿದಾಯಕ ವಿಷಯವೊಂದನ್ನು ಹೇಳಲಿದ್ದೇವೆ. ವಾಸ್ತವವಾಗಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಮೊದಲ ವಿಡಿಯೋ ಯಾವುದು ಎಂದು ನೀವು ಯಾವಾಗದರೂ ಯೋಚಿಸಿದ್ದೀರಾ..?. ಯೂಟ್ಯೂಬ್​ನಲ್ಲಿ ಮೊದಲ ವಿಡಿಯೋ ಅಪ್ಲೋಡ್ ಮಾಡಿದವರು ಯಾರು..ಎಲ್ಲಿ..ಯಾವಾಗ ಗೊತ್ತಾ?. ಯುವಕನೊಬ್ಬನ ವಿಡಿಯೋವನ್ನು ಮೊದಲು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಯಾರು ಅಪ್ಲೋಡ್ ಮಾಡಿದ್ದಾರೆ?. ಇದು ಯಾವ ವಿಷಯದ ಬಗ್ಗೆ?. ಇಲ್ಲಿದೆ ನೋಡಿ ಮಾಹಿತಿ.

ಅತಿ ಕಡಿಮೆ ಬೆಲೆಯ ಬೆಸ್ಟ್ 5G ಫೋನ್ ಪೋಕೋ M6 ಪ್ರೊ ಮಾರಾಟಕ್ಕೆ ಕ್ಷಣಗಣನೆ: ಭರ್ಜರಿ ಸೇಲ್ ಖಚಿತ

ಇದನ್ನೂ ಓದಿ

ಯೂಟ್ಯೂಬ್‌ನಲ್ಲಿನ ಮೊದಲ ವಿಡಿಯೋಗೆ “ಮೇನ್ ಚಿಡಿಯಾ ಘರ್ ಮೇ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು 23 ಏಪ್ರಿಲ್ 2005 ರಂದು ರಾತ್ರಿ 8.27 ಕ್ಕೆ ಅಪ್‌ಲೋಡ್ ಮಾಡಲಾಗಿದೆ. ಸ್ಯಾನ್ ಡಿಯಾಗೋ ಮೃಗಾಲಯಕ್ಕೆ ಭೇಟಿ ನೀಡಿದ ಜಾವೇದ್ ಕರೀಮ್ ಎಂಬವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಪ್ರೇಕ್ಷಕರಿಗೆ ಆನೆಯ ಬಗ್ಗೆ ಮೂಲ ಮಾಹಿತಿ ನೀಡಿದ್ದಾರೆ. ನೀವು ಈ ವಿಡಿಯೋವನ್ನು Jawada YouTube ಚಾನಲ್‌ನಲ್ಲಿ ವೀಕ್ಷಿಸಬಹುದು. ಇದು ಕೇವಲ 19 ಸೆಕೆಂಡುಗಳ ವಿಡಿಯೋ ಮಾತ್ರ ಆಗಿದೆ. ಆದರೆ, ಇದು ಇಲ್ಲಿಯವರೆಗೆ 281 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಲ್ಲಿದೆ ನೋಡಿ ಆ ವಿಡಿಯೋ.

14 ಫೆಬ್ರವರಿ 2005 ರಂದು ಯೂಟ್ಯೂಬ್ ಅನ್ನು ಪ್ರಾರಂಭಿಸಲಾಯಿತು. ಕ್ರಮೇಣ ಈ ಪ್ಲಾಟ್‌ಫಾರ್ಮ್ ಎಷ್ಟು ಜನಪ್ರಿಯವಾಯಿತು ಎಂದರೆ ಇಂದು ಜನರು ಇದರಿಂದ ಭಾರಿ ಹಣವನ್ನು ಗಳಿಸುತ್ತಿದ್ದಾರೆ. ಪ್ರಸ್ತುತ, T-ಸಿರೀಸ್ ವಿಶ್ವದಲ್ಲಿ ಅತಿ ಹೆಚ್ಚು ಚಂದಾದಾರರಾಗಿರುವ ಯೂಟ್ಯೂಬ್ ಚಾನಲ್ ಆಗಿದೆ. ಇದು 246 ಮಿಲಿಯನ್ ಸದಸ್ಯರನ್ನು ಹೊಂದಿದೆ. ಮುಂದಿನದು ಮಿಸ್ಟರ್ ಬೀಸ್ಟ್ ಅವರ ಯೂಟ್ಯೂಬ್ ಚಾನೆಲ್. ಇದು 171 ಮಿಲಿಯನ್ ಚಂದಾದಾರರನ್ನು ಹೊಂದಿದೆ.

ಇಂದು ಪ್ರತಿ ನಿಮಿಷಕ್ಕೆ 500 ಗಂಟೆಗಳ ವಿಷಯವನ್ನು ಯೂಟ್ಯೂಬ್​ಗೆ ಅಪ್‌ಲೋಡ್ ಮಾಡಲಾಗುತ್ತದಂತೆ. ಯೂಟ್ಯೂಬ್ ಉಚಿತ ಮತ್ತು ಪಾವತಿ ಆಯ್ಕೆಯನ್ನು ಹೊಂದಿದೆ. ಪಾವತಿಸಿದ ಆವೃತ್ತಿಯಲ್ಲಿ ನೀವು ಜಾಹೀರಾತುಗಳ ರಹಿತ ಉಚಿತ ಅನುಭವವನ್ನು ಪಡೆಯಬಹುದು. ಗೂಗಲ್ ಒಡೆತನದ ಈ ಯೂಟ್ಯೂಬ್​ನಲ್ಲಿ ಇನ್ನಷ್ಟು ಅನೇಕ ಯೂಸರ್ ಫ್ರೆಂಡ್ಲಿ ಫೀಚರ್ಸ್ ಬರಲಿದೆ.

Published On – 1:44 pm, Thu, 10 August 23

ತಾಜಾ ಸುದ್ದಿ

Leave A Reply

Your email address will not be published.