EBM News Kannada
Leading News Portal in Kannada

ಮೊದಲ ದಿನವೇ ದಾಖಲೆಯ ಮಾರಾಟ ಕಂಡ ರೆಡ್ಮಿ 12 ಸರಣಿ: ಸೇಲ್ ಆಗಿದ್ದು ಎಷ್ಟು ಫೋನ್ ಗೊತ್ತೇ? – Kannada News | Redmi 12 Series sells over 300,000 units in India on the first day of its launch

0


Redmi 12 Series: ರೆಡ್ಮಿ 12 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ. ಕ್ರಿಸ್ಟಲ್ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಅಸಾಧಾರಣ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.

ಚೀನಾ ಮೂಲದ ಪ್ರಸಿದ್ಧ ಶವೋಮಿ (Xiaomi) ಕಂಪನಿ ಇತ್ತೀಚೆಗೆ ಭಾರತದಲ್ಲಿ ತನ್ನ ರೆಡ್ಮಿ 12 ಸರಣಿಯ ಸ್ಮಾರ್ಟ್​ಫೋನನ್ನು ಅನಾವರಣ ಮಾಡಿತ್ತು. ಇದರಲ್ಲಿ ರೆಡ್ಮಿ 12 4G (Redmi 12 4G) ಮತ್ತು ರೆಡ್ಮಿ 12 5G ಎಂಬ ಎರಡು ಫೋನ್ ಇದೆ. ಶುಕ್ರವಾರ ಈ ಮೊಬೈಲ್ ದೇಶದಲ್ಲಿ ತನ್ನ ಮಾರಾಟವನ್ನು ಆರಂಭಿಸಿದೆ. ಇದೀಗ ಈ ಫೋನಿನ ಬಗ್ಗೆ ಶವೋಮಿ ಮಹತ್ವದ ವಿಚಾರ ಹಂಚಿಕೊಂಡಿದೆ. ಸೇಲ್ ಪ್ರಾರಂಭವಾದ ಮೊದಲ ದಿನದಲ್ಲಿ ರೆಡ್ಮಿ 12 ಸರಣಿಯ (Redmi 12 Series) ಫೋನುಗಳು ಬರೋಬ್ಬರಿ 300,000 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಎರಡೂ ಸ್ಮಾರ್ಟ್​ಫೋನ್​ಗಳಿಗೆ ಮಧ್ಯಮ ಶ್ರೇಣಿಯ ಖರೀದಿದಾರರಿಂದ ಉತ್ತಮವಾಗಿ ಪ್ರತಿಕ್ರಿಯೆ ಕೇಳಿಬಂದಿದೆ.

ರೆಡ್ಮಿ 12 ಸರಣಿಯು ಪ್ರೀಮಿಯಂ ಸ್ಮಾರ್ಟ್‌ಫೋನ್ ಅನುಭವವನ್ನು ಒದಗಿಸುತ್ತದೆ. ಕ್ರಿಸ್ಟಲ್ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಅಸಾಧಾರಣ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಫೋನ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ರೆಡ್ಮಿ 12 5G ಯ ​​ಪ್ರಮುಖ ಅಂಶವೆಂದರೆ ಇದು ಸ್ನಾಪ್​ಡ್ರಾಗನ್ 4 Gen 2 5G ಪ್ರೊಸೆಸರ್ ಹೊಂದಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಪ್ರೊಸೆಸರ್ 4nm ಆರ್ಕಿಟೆಕ್ಚರ್ ಅನ್ನು ಹೊಂದಿದೆ.

ಅತಿ ಕಡಿಮೆ ಬೆಲೆಯ ಜಿಯೋಬುಕ್ ಲ್ಯಾಪ್​ಟಾಪ್ ಇಂದಿನಿಂದ ಖರೀದಿಗೆ ಲಭ್ಯ: ಏನೆಲ್ಲ ಫೀಚರ್ಸ್ ಇದೆ ನೋಡಿ

ಇದನ್ನೂ ಓದಿ

ಬೆಲೆ ಮತ್ತು ಲಭ್ಯತೆ:

ರೆಡ್ಮಿ 12 4G ಮತ್ತು ರೆಡ್ಮಿ 12 5G ಈಗ ಆಕರ್ಷಕ ಬೆಲೆಗಳಲ್ಲಿ ಅದ್ಭುತ ಕೊಡುಗೆಗಳೊಂದಿಗೆ ಲಭ್ಯವಿದೆ. ರೆಡ್ಮಿ 12 4G 4GB+128GB ರೂಪಾಂತರಕ್ಕೆ ರೂ 8,999 ಮತ್ತು 6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ. ನೀವು Mi.com, ಫ್ಲಿಪ್​ಕಾರ್ಟ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದು.

5G ಅನುಭವವನ್ನು ಬಯಸುವವರಿಗೆ, ರೆಡ್ಮಿ 12 5G ಫೋನ್ ಖರೀದಿಸಬಹುದು. ಇದರ 4GB+128GB ರೂಪಾಂತರಕ್ಕೆ 10,999 ರೂ., 6GB+128GB ರೂಪಾಂತರಕ್ಕೆ 12,499 ರೂ. ಮತ್ತು 8GB+256GB ರೂಪಾಂತರಕ್ಕೆ 14,999 ರೂ. ನಿಗದಿ ಮಾಡಲಾಗಿದೆ. ಈ ಅದ್ಭುತ ಕೊಡುಗೆಗಳು Mi.com, ಅಮೆಜಾನ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಿವೆ.

ಇದರ ಜೊತೆಗೆ ಬಂಪರ್ ಆಫರ್​ಗಳನ್ನು ಕೂಡ ಘೋಷಣೆ ಮಾಡಲಾಗಿದೆ. ನೀವು ICICI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹೊಂದಿದ್ದರೆ, ರೆಡ್ಮಿ 12 4G ಅಥವಾ ರೆಡ್ಮಿ 12 5G ಯ ​​4GB ರೂಪಾಂತರದ ಖರೀದಿಯ ಮೇಲೆ 1000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ. ರೆಡ್ಮಿ 12 4G ಯ 6GB ರೂಪಾಂತರ ಅಥವಾ ರೆಡ್ಮಿ 12 5G ಯ ​​8GB ರೂಪಾಂತರವನ್ನು ಆರಿಸಿದರೆ, ನೀವು 1000 ರೂಗಳ ರಿಯಾಯಿತಿಯನ್ನು ಪಡೆಯಬಹುದು.

ತಾಜಾ ಸುದ್ದಿ

Leave A Reply

Your email address will not be published.