ಲಕ್ನೊ : ಅಗ್ರ ಶ್ರೇಯಾಂಕಿತೆ ಪಿ.ವಿ. ಸಿಂಧು ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಶನಿವಾರ 36 ನಿಮಿಷಗಳಲ್ಲಿ ಕೊನೆಗೊಂಡಿರುವ ಸೆಮಿ ಫೈನಲ್ ಪಂದ್ಯದಲ್ಲಿ ಹಿರಿಯ ಆಟಗಾರ್ತಿ ಸಿಂಧು ಅವರು ತಮ್ಮದೇ ದೇಶದ ಉನ್ನತಿ ಹೂಡಾ ಅವರನ್ನು 21-12, 21-9 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಸಿಂಧು ಫೈನಲ್ ಪಂದ್ಯದಲ್ಲಿ ಥಾಯ್ಲೆಂಡ್‌ನ ಲಾಲಿನ್ರಾಟ್ ಚೈವಾನ್ ಅಥವಾ ಚೀನಾ ಲುವೊ ಯು ಅವರನ್ನು ಎದುರಿಸಲಿದ್ದಾರೆ.
ಭಾರತದ ಮಿಶ್ರ ಡಬಲ್ಸ್ ಜೋಡಿ ತನಿಶಾ ಕ್ರಾಸ್ಟೊ ಹಾಗೂ ಧ್ರುವ್ ಕಪಿಲಾ ಕೂಡ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕ್ರಾಸ್ಟೊ ಹಾಗೂ ಕಪಿಲ್ ಚೀನಾದ ಜೋಡಿ ಝಿ ಹಾಂಗ್ ಝೌ ಹಾಗೂ ಜಿಯಾ ಯಾಂಗ್ ಅವರನ್ನು 21-16, 21-15 ಗೇಮ್‌ಗಳ ಅಂತರದಿಂದ ಮಣಿಸಿದರು.
ಕ್ರಾಸ್ಟೊ ಹಾಗೂ ಕಪಿಲ್ ಜೋಡಿಯ ಫೈನಲ್ ಎದುರಾಳಿ ಇನ್ನಷ್ಟೇ ನಿರ್ಧಾರವಾಗಬೇಕಾಗಿದೆ.