ಕಲಬುರಗಿ : ಕಲಬುರಗಿ ಐಟಿಎಫ್ ಓಪನ್ ಟೆನಿಸ್ ಪಂದ್ಯದಲ್ಲಿ ಗುರುವಾರ ಕನ್ನಡಿಗರಾದ ಎಸ್.ಡಿ. ಪ್ರಜ್ವಲ್ ದೇವ್ ಹಾಗೂ ಧೀರಜ್ ಕೊಡಂಚ ಸೋಲನುಭವಿಸಿದರೆ, ಇತರ ನಾಲ್ವರು ಭಾರತೀಯರು ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು.
ರಶ್ಯದ ಆಟಗಾರ ಬೊಗ್ಡಾನ್ ಬೊಬ್ರೊವ್ 2ನೇ ಸುತ್ತಿನ ಪಂದ್ಯದಲ್ಲಿ 6-2, 6-3 ಅಂತರದಲ್ಲಿ ಪ್ರಜ್ವಲ್ರನ್ನು ಹಿಮ್ಮಟ್ಟಿಸಿದರು. ಈ ಮೂಲಕ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದರು.
ಖುಮೋಯುನ್ ಸುಲ್ತಾನೋವ್ (ಉಜ್ಬೇಕಿಸ್ತಾನ) ಬೆಂಗಳೂರಿನ ಧೀರಜ್ ಕೊಡಂಚ ಶ್ರೀನಿವಾಸನ್ ವಿರುದ್ಧ 6-4, 6-0 ಅಂತರದ ಜಯ ದಾಖಲಿಸಿದರು.
ಭಾರತದ ಕರಣ್ ಸಿಂಗ್, ದೇವ್ ಜಾವಿಯಾ, ಆರ್ಯನ್ ಶಾ ಹಾಗ್ತೂ ಸಿದ್ಧಾರ್ಥ್ ರಾವತ್ ಕೊನೆಯ-8ರ ಹಂತಕ್ಕೆ ಪ್ರವೇಶಿಸುವಲ್ಲಿ ಯಶಸ್ವಿಯಾದರು.
ದೇವ್ ಜಾವಿಯಾ ಅವರು ಎಂ. ರಿಫ್ಕಿ ಫಿಟ್ರಿಯಾಡಿ (ಇಂಡೋನೇಷ್ಯಾ) ಅವರನ್ನು 5-7, 6-2, 6-2 ಅಂತರದಲ್ಲಿ ಮಣಿಸಿದರು.
ಕರಣ್ ಸಿಂಗ್.ಎದುರಾಳಿ ನಿತಿನ್ ಕುಮಾರ್ ಸಿನ್ಹಾ ಅವರನ್ನು 6-4, 6-3 ಅಂತರದಲ್ಲಿ ಸೋಲಿಸಿದರು. ಸಿದ್ಧಾರ್ಥ್ ರಾವತ್ ಎದುರಾಳಿ ಆದಿತ್ಯ ಗಣೇಶನ್ (ಯುಎಸ್ಎ) ವಿರುದ್ಧ 6-3, 7-6 (7-0) ಅಂತರದಿಂದ ಗೆಲುವು ಸಾಧಿಸಿದರು.
ಆರ್ಯನ್ ಶಾ ಅವರು ಮನೀಶ್ ಸುರೇಶ್ಕುಮಾರ್ ವಿರುದ್ಧ 6-3, 6-3 ಅಂತರದ ಗೆಲುವು ಸಾಧಿಸಿ ಮುನ್ನಡೆದರು.