EBM News Kannada
Leading News Portal in Kannada

ಕೇರಳಕ್ಕೆ ಲಿಯೊನೆಲ್ ಮೆಸ್ಸಿ | ಮುಂದಿನ ವರ್ಷ ಕೊಚ್ಚಿಯಲ್ಲಿ ಸೌಹಾರ್ದ ಪಂದ್ಯ ಆಡಲು ಅರ್ಜೆಂಟೀನ ಸಜ್ಜು

0


ತಿರುವನಂತಪುರ : ಅರ್ಜೆಂಟೀನ ರಾಷ್ಟ್ರೀಯ ಫುಟ್ಬಾಲ್ ತಂಡವು ಮುಂದಿನ ವರ್ಷ ಕೇರಳದಲ್ಲಿ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ ಎಂದು ಕೇರಳದ ಕ್ರೀಡಾ ಸಚಿವ ವಿ.ಅಬ್ದುಲ್ ರಹಿಮಾನ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಪಾನ್ ಹಾಗೂ ಖತರ್ ಅರ್ಜೆಂಟೀನ ತಂಡಕ್ಕೆ ಎದುರಾಳಿಯಾಗುವ ಸಾಧ್ಯತೆಯಿದೆ. ಲಿಯೊನೆಲ್ ಮೆಸ್ಸಿ ತಂಡದ ಭಾಗವಾಗುವ ನಿರೀಕ್ಷೆ ಇದೆ. ಕೊಚ್ಚಿ ನಗರವು ತಾತ್ಕಾಲಿಕ ಸ್ಥಳವಾಗಿದ್ದು, ಇತರ ನಗರಗಳಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಒಟ್ಟು ವೆಚ್ಚ ಸುಮಾರು 100 ಕೋಟಿ ರೂ. ಆಗಲಿದ್ದು, ಪ್ರಾಯೋಜಕತ್ವದ ಮೂಲಕ ಇದನ್ನು ಭರಿಸಲಾಗುವುದು. ರಾಜ್ಯ ವರ್ತಕರ ಸಂಘ ಟೂರ್ನಿಯನ್ನು ಆಯೋಜಿಸಲು ಮುಂದೆ ಬಂದಿದೆ ಎಂದು ಸಚಿವರು ಹೇಳಿದ್ದಾರೆ.

ಅರ್ಜೆಂಟೀನದ ಫುಟ್ಬಾಲ್ ಸಂಸ್ಥೆಯ(ಎಎಫ್‌ಎ) ನಿಯೋಗವು ಶೀಘ್ರವೇ ಕೇರಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಲಿದೆ. ಆ ನಂತರ ಅಂತಿಮ ಘೋಷಣೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಕೇರಳ ಕ್ರೀಡಾ ಸಚಿವರು ಈ ವರ್ಷಾರಂಭದಲ್ಲಿ ಸ್ಪೇನ್‌ನಲ್ಲಿ ಎಎಫ್‌ಎ ಅಧಿಕಾರಿಗಳೊಂದಿಗೆ ಪೂರ್ವಭಾವಿ ಚರ್ಚೆಗಳನ್ನು ನಡೆಸಿದ್ದಾರೆ.

Leave A Reply

Your email address will not be published.