ಕೊಲಂಬೊ : ತನ್ನ ಮೊಣಕೈ ಗಾಯದಿಂದ ಚೇತರಿಸಿಕೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಅವರು ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ವಾಪಸಾಗಲಿದ್ದಾರೆ. ಸರಣಿಯು ನವೆಂಬರ್ 27ರಿಂದ ಡರ್ಬನ್‌ನಲ್ಲಿ ಆರಂಭವಾಗಲಿದೆ.
ಬವುಮಾ ಅವರು ದಕ್ಷಿಣ ಆಫ್ರಿಕಾದ ಮಧ್ಯಮ ಸರದಿಯ ಪ್ರಮುಖ ಆಟಗಾರನಾಗಿದ್ದಾರೆ. ಬವುಮಾ ಮರಳಿಕೆಯಿಂದ ಆಫ್ರಿಕಾ ತಂಡ ಬಲಿಷ್ಠವಾಗಿದೆ. ದಕ್ಷಿಣ ಆಫ್ರಿಕಾವು ಮುಂದಿನ ವರ್ಷ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ಗುರಿ ಇಟ್ಟುಕೊಂಡಿದೆ.
ಆಲ್‌ರೌಂಡರ್ ಮಾರ್ಕೊ ಜಾನ್ಸನ್ ವಿಶ್ರಾಂತಿಯ ನಂತರ ತಂಡಕ್ಕೆ ವಾಪಸಾಗಿದ್ದಾರೆ. ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಝಿ ಗಾಯದಿಂದ ಚೇತರಿಸಿಕೊಂಡ ನಂತರ ಮರಳಿದ್ದಾರೆ. ಈ ಇಬ್ಬರು ಆಟಗಾರರು ಬಾಂಗ್ಲಾದೇಶ ವಿರುದ್ದ ಇತ್ತೀಚೆಗಿನ ಸರಣಿಯಿಂದ ವಂಚಿತರಾಗಿದ್ದರು.
ನಾವು ಸ್ಪರ್ಧೆಯಲ್ಲಿರುವುದನ್ನು ಖಚಿತಪಡಿಸಲು ಸಾಧ್ಯವಾದಷ್ಟು ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂದು ಕೋಚ್ ಶುಕ್ರಿ ಕೊನ್ರಾಡ್ ಹೇಳಿದ್ದಾರೆ.
*ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ(ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ಜೆರಾಲ್ಡ್ ಕೊಯೆಟ್ಝಿ, ಟೋನಿ ಡಿ ರೊರ್ಝಿ, ಮಾರ್ಕೊ ಜಾನ್ಸನ್, ಕೇಶವ ಮಹಾರಾಜ್, ಮರ್ಕ್ರಮ್, ವಿಯಾನ್ ಮುಲ್ಡರ್, ಮುತ್ತುಸ್ವಾಮಿ, ಡೇನ್ ಪೀಟರ್ಸನ್, ಕಾಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ರಯಾನ್ ರಿಕೆಲ್ಟನ್ ಹಾಗೂ ಕೈಲ್ ವೆರೆನ್ನೆ.