EBM News Kannada
Leading News Portal in Kannada

ಆರ್‌ಸಿಬಿ ತಂಡದ ನೂತನ ಬೌಲಿಂಗ್ ಕೋಚ್ ಆಗಿ ಓಂಕಾರ್ ಸಾಲ್ವಿ

0


ಬೆಂಗಳೂರು : ಐಪಿಎಲ್ ಮೆಗಾ ಹರಾಜಿಗೂ ಮುನ್ನ ಓಂಕಾರ್ ಸಾಲ್ವಿ ಅವರನ್ನು ತಂಡದ ಬೌಲಿಂಗ್ ಕೋಚ್ ಆಗಿ ಆರ್ಸಿಬಿ ನೇಮಿಸಿದೆ. 2025 ರ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆಯಲಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದು, ಇದರ ನಡುವೆಯೇ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿರುವ ಆರ್ಸಿಬಿ, ಮುಂಬೈ ತಂಡದ ರಣಜಿ ಚಾಂಪಿಯನ್ ಆದಾಗ ಕೋಚ್ ಆಗಿದ್ದ ಓಂಕಾರ್ ಸಾಲ್ವಿ ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ ಎಂದು ವರದಿಯಾಗಿದೆ. ಓಂಕಾರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲೂ ಕೆಲಸ ಮಾಡಿದ್ದಾರೆ.

ಓಂಕಾರ್ ಸಾಲ್ವಿ ಅವರಿಗೆ ಆಟಗಾರನಾಗಿ ಹೆಚ್ಚಿನ ಅನುಭವವಿಲ್ಲ. ಅವರು 2005 ರಲ್ಲಿ ರೈಲ್ವೇಸ್ ಪರವಾಗಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದು, ತಮ್ಮ ವೃತ್ತಿಜೀವನದಲ್ಲಿ ಕೇವಲ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ. ಆಟಗಾರನಾಗಿ ಓಂಕಾರ್ ಸಾಲ್ವಿ ಹೆಚ್ಚು ಪ್ರಸಿದ್ಧರಾಗದಿದ್ದರೂ, ಕೋಚ್ ಆಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಆರ್ಸಿಬಿ ತಂಡದಲ್ಲಿ ಮೂವರು ಆಟಗಾರರು:

ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಕೇವಲ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ಅದರಲ್ಲಿ ಅತ್ಯಧಿಕ 21 ಕೋಟಿ ಸಂಭಾವನೆ ನೀಡಿ ವಿರಾಟ್ ಕೊಹ್ಲಿಯನ್ನು ಮೊದಲ ಆಯ್ಕೆಯಾಗಿ ಉಳಿಸಿಕೊಂಡಿರುವ ಆರ್ಸಿಬಿ, 11 ಕೋಟಿ ಸಂಭಾವನೆ ನೀಡಿ ರಜತ್ ಪಾಟಿದಾರ್ ಅವರನ್ನು ಹಾಗೂ ಯಶ್ ದಯಾಳ್ ಅವರನ್ನು 5 ಕೋಟಿ ರೂಪಾಯಿ ಸಂಭಾವನೆಯೊಂದಿಗೆ ತಂಡದಲ್ಲಿ ಉಳಿಸಿಕೊಂಡಿದೆ.

ಹೀಗಾಗಿ ಮೆಗಾ ಹರಾಜಿನಲ್ಲಿ ಆರ್ಸಿಬಿಗೆ ಬ್ಯಾಟ್ಸ್ಮನ್ಗಳ ಜೊತೆಗೆ ಬೌಲರ್ಗಳು, ಆಲ್ರೌಂಡರ್ಸ್ ಹಾಗೂ ಸ್ಪಿನ್ನರ್ಗಳು ಬೇಕಾಗಿದ್ದಾರೆ. ಆರ್ಸಿಬಿ ಯಾರನ್ನು ತನ್ನ ತೆಕ್ಕಗೆ ಸೆಳೆಯಲಿದೆ ಎನ್ನುವ ಕುತೂಹಲ ಮೂಡಿದೆ.



Leave A Reply

Your email address will not be published.