EBM News Kannada
Leading News Portal in Kannada

ವಾಶಿಂಗ್ಟನ್ ಸುಂದರ್ ಗೆ ಕ್ಲೀನ್ ಬೌಲ್ಡ್ ಆದ ಕಿವೀಸ್ | 259ಕ್ಕೆ ಆಲೌಟ್

0


ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ವಾಶಿಂಗ್ಟನ್ ಸುಂದರ್ ಸ್ಪಿನ್ ಮೋಡಿಗೆ 259 ರನ್ ಗಳಿಗೆ ಆಲೌಟ್ ಆಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಊಟದ ವಿರಾಮದ ವೇಳೆ 92 ರನ್ ಗಳಿಸಿತ್ತು. ರವಿಚಂದ್ರ ಅಶ್ವಿನ್ ಸ್ಪಿನ್ ದಾಳಿಯು ಆರಂಭದಲ್ಲಿ ಕಿವೀಸ್ ಆಟಗಾರರನ್ನು ಕಟ್ಟಿ ಹಾಕಿತು. ಬಳಿಕ ದಾಳಿ ಆರಂಭಿಸಿದ ವಾಶಿಂಗ್ಟನ್ ಸುಂದರ್ ಗೆ ಕಿವೀಸ್ ನ ವಿಕೆಟ್ ಗಳು ತರಗೆಲೆಗಳಂತೆ ಉದುರಿತು.

ಪರಿಣಾಮವಾಗಿ 79.1 ಓವರ್ ಗಳಲ್ಲಿ ಆಲೌಟ್ ಆದ ನ್ಯೂಝಿಲೆಂಡ್ 259 ರನ್ ಗಳಿಸಿತು.

►ವಾಶಿಂಗ್ಟನ್ ಸುಂದರ್ ಗೆ 7 ವಿಕೆಟ್!

ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ವಾಶಿಂಗ್ಟನ್ ಸುಂದರ್ 23.1 ಓವರ್ ಎಸೆದು 7 ವಿಕೆಟ್ ಪಡೆದರು. ಡೆರಿಲ್ ಮಿಷೆಲ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದ ಸುಂದರ್, ರಚಿನ್ ರವೀಂದ್ರ, ಮಿಷೆಲ್ ಸ್ಯಾಂಟನರ್, ಟಿಮ್ ಸೌಥಿ, ಎಜಾಝ್ ಪಟೇಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಗ್ಲೆನ್ ಪಿಲಿಪ್ಸ್ ವಾಶಿಂಗ್ಟನ್ ಎಸೆತದಲ್ಲಿ ರವಿಚಂದ್ರ ಅಶ್ವಿನ್ ಗೆ ಕ್ಯಾಚಿತ್ತರು.

Leave A Reply

Your email address will not be published.