EBM News Kannada
Leading News Portal in Kannada

ಸ್ವದೇಶದಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾದ ಟೀಮ್ ಇಂಡಿಯಾ

0


ಬೆಂಗಳೂರು : ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡದ ವಿರುದ್ಧ ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾವು ತನ್ನ ಮೊದಲ ಇನಿಂಗ್ಸ್ ನಲ್ಲಿ ಕೇವಲ 46 ರನ್ ಗಳಿಸಿ ಸರ್ವಪತನಗೊಂಡಿದೆ. ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಕನಿಷ್ಠ ಮೊತ್ತ ಗಳಿಸಿತು.

ಭಾರತ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟಾರೆ ಮೂರನೇ ಕನಿಷ್ಠ ಮೊತ್ತಕ್ಕೆ ಆಲೌಟಾಯಿತು.

ನಾಯಕ ರೋಹಿತ್ ಶರ್ಮಾ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೋಡ ಮುಸುಕಿದ ವಾತಾವರಣದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡು ಅಚ್ಚರಿ ಮೂಡಿಸಿದರು.

ಮ್ಯಾಟ್ ಹೆನ್ರಿ (5-15)ಹಾಗೂ ವಿಲಿಯಮ್ ಒ ರೂರ್ಕಿ(4-22) ಭಾರತದ ಮಹಾ ಪತನಕ್ಕೆ ಪ್ರಮುಖ ಕಾರಣರಾದರು. ರೋಹಿತ್ ಶರ್ಮಾ ಬಳಗವು ಕೇವಲ 31.2 ಓವರ್ಗಳಲ್ಲಿ ಗಂಟುಮೂಟೆ ಕಟ್ಟಿದರು.

ರಿಷಭ್ ಪಂತ್(20 ರನ್) ಹಾಗೂ ಯಶಸ್ವಿ ಜೈಸ್ವಾಲ್(13 ರನ್)ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದರು. ಭಾರತದ ಐವರು ಬ್ಯಾಟರ್ ಗಳಾದ-ವಿರಾಟ್ ಕೊಹ್ಲಿ, ಸರ್ಫರಾಝ್ ಖಾನ್, ಕೆ.ಎಲ್.ರಾಹುಲ್, ಆರ್.ಅಶ್ವಿನ್ ಹಾಗೂ ಜಸ್ಪ್ರಿತ್ ಬುಮ್ರಾ ಶೂನ್ಯಕ್ಕೆ ಔಟಾದರು.

ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ತಂಡವು 9.4 ಓವರ್ ಗಳಲ್ಲಿ ಕೇವಲ 10 ರನ್ ಗಳಿಸುವಷ್ಟರಲ್ಲಿ ಮೂರು ವಿಕೆಟ್ಗಳನ್ನು ಕಳೆದುಕೊಂಡಿತು. ಮೊದಲ ಸೆಶನ್ನಲ್ಲಿ 34 ರನ್ ಗೆ 6 ವಿಕೆಟ್ ಗಳನ್ನು ಕಳೆದುಕೊಂಡಿತು. ಭಾರತದ ಉಳಿದ ನಾಲ್ಕು ವಿಕೆಟ್ ಗಳು ಸೆಕೆಂಡ್ ಮೊದಲ 30 ನಿಮಿಷಗಳಲ್ಲಿ ಪತನಗೊಂಡವು.

ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ತಂಡ ನ್ಯೂಝಿಲ್ಯಾಂಡ್ ವಿರುದ್ದ ಅತ್ಯಂತ ಕನಿಷ್ಠ ಮೊತ್ತ ಗಳಿಸಿದೆ. ಈ ಮೊದಲು 1976ರಲ್ಲಿ ಕಿವೀಸ್ ವಿರುದ್ಧ ಕನಿಷ್ಠ ಸ್ಕೋರ್(81ರನ್)ಗಳಿಸಿತ್ತು.

►ಸ್ವದೇಶದಲ್ಲಿ ಭಾರತದ ಕನಿಷ್ಠ ಟೆಸ್ಟ್ ಸ್ಕೋರ್

46 ರನ್ : ಬೆಂಗಳೂರಿನಲ್ಲಿ 2024ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ

75 ರನ್ : ಹೊಸದಿಲ್ಲಿಯಲ್ಲಿ 1987ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ

76 ರನ್: ಅಹ್ಮದಾಬಾದ್ ನಲ್ಲಿ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ

83 ರನ್: ಚೆನ್ನೈನಲ್ಲಿ 1977ರಲ್ಲಿ ಇಂಗ್ಲೆಂಡ್ ವಿರುದ್ಧ

83 ರನ್: ಮೊಹಾಲಿಯಲ್ಲಿ 1999ರಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ

►ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಕನಿಷ್ಠ ಸ್ಕೋರ್

ಸ್ಕೋರ್ ಎದುರಾಳಿ ಸ್ಥಳ ವರ್ಷ

36 ಅಸ್ಟ್ರೇಲಿಯ ಅಡಿಲೇಡ್ 2020

42 ಇಂಗ್ಲೆಂಡ್ ಲಾರ್ಡ್ಸ್ 1974

46 ನ್ಯೂಝಿಲ್ಯಾಂಡ್ ಬೆಂಗಳೂರು 2024

58 ಆಸ್ಟ್ರೇಲಿಯ ಬ್ರಿಸ್ಬೇನ್ 1947

58 ಇಂಗ್ಲೆಂಡ್ ಮ್ಯಾಂಚೆಸ್ಟರ್ 1952

66 ದ.ಆಫ್ರಿಕಾ ಡರ್ಬನ್ 1996

67 ಆಸ್ಟ್ರೇಲಿಯ ಮೆಲ್ಬರ್ನ್ 1948

75 ವೆಸ್ಟ್ಇಂಡೀಸ್ ಹೊಸದಿಲ್ಲಿ 1987

76 ದ.ಆಫ್ರಿಕಾ ಅಹ್ಮದಾಬಾದ್ 2008

78 ಇಂಗ್ಲೆಂಡ್ ಲೀಡ್ಸ್ 2021

► ಟೆಸ್ಟ್ ಕ್ರಿಕೆಟ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಗಳಿಸಿದ ಕನಿಷ್ಠ ಸ್ಕೋರ್

46 ರನ್: ಬೆಂಗಳೂರು, 2024

81 ರನ್: ವೆಲ್ಲಿಂಗ್ಟನ್,1976

83 ರನ್: ಮೊಹಾಲಿ, 1999

88 ರನ್: ಬ್ರೆಬೋರ್ನ್, 1965

89 ರನ್: ಹೈದರಾಬಾದ್(ಡೆಕ್ಕನ್), 1969

99 ರನ್-ಹ್ಯಾಮಿಲ್ಟನ್, 2002

Leave A Reply

Your email address will not be published.