EBM News Kannada
Leading News Portal in Kannada

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 2ನೇ ಅತಿ ವೇಗದ ತ್ರಿಶತಕ ಸಿಡಿಸಿದ ಹ್ಯಾರಿ ಬ್ರೂಕ್

0


ಮುಲ್ತಾನ್ : ಇಂಗ್ಲೆಂಡ್ ತಂಡದ ಬ್ಯಾಟರ್ ಹ್ಯಾರಿ ಬ್ರೂಕ್ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ತನ್ನ ಚೊಚ್ಚಲ ತ್ರಿಶತಕ ಸಿಡಿಸಿದರು.

25 ರ ವಯಸ್ಸಿನ ಬ್ರೂಕ್ 3ನೇ ದಿನದಾಟವಾದ ಗುರುವಾರ ಪಾಕಿಸ್ತಾನದ ಸ್ಪಿನ್ನರ್ ಸಯೀಮ್ ಅಯ್ಯೂಬ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸುವ ಮೂಲಕ ತನ್ನ ತ್ರಿಶತಕ ಪೂರ್ಣಗೊಳಿಸಿದರು. ಇದರೊಂದಿಗೆ ಟೆಸ್ಟ್ ಪಂದ್ಯದಲ್ಲಿ 300 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಇಂಗ್ಲೆಂಡ್‌ನ 6ನೇ ಬ್ಯಾಟರ್ ಎನಿಸಿಕೊಂಡರು.

ಬ್ರೂಕ್ ಕೇವಲ 310 ಎಸೆತಗಳಲ್ಲಿ 28 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಾಯದಿಂದ ತ್ರಿಶತಕ ಬಾರಿಸಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ತ್ರಿಶತಕ ಸಿಡಿಸಿದರು. ಭಾರತದ ವೀರೇಂದ್ರ ಸೆಹ್ವಾಗ್ ಅತ್ಯಂತ ವೇಗದಲ್ಲಿ ತ್ರಿಶತಕ ಸಿಡಿಸಿದ್ದರು. 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ 278 ಎಸೆತಗಳಲ್ಲಿ ಸೆಹ್ವಾಗ್ ಈ ಸಾಧನೆ ಮಾಡಿದ್ದರು.

ಬ್ರೂಕ್ 1990ರ ನಂತರ ತ್ರಿಶತಕ ಸಿಡಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರನಾಗಿದ್ದಾರೆ. 1990ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗ್ರಹಾಮ್ ಗೂಚ್ ಭಾರತ ವಿರುದ್ಧ 333 ರನ್ ಗಳಿಸಿದ್ದರು.

ಬ್ರೂಕ್ ಅವರು ತ್ರಿಶತಕ ಸಿಡಿಸಿದ್ದಲ್ಲದೆ ಜೋ ರೂಟ್‌ರೊಂದಿಗೆ ದಾಖಲೆಯ ಜೊತೆಯಾಟ ನಡೆಸಿದರು. ಈ ಇಬ್ಬರು 4ನೇ ವಿಕೆಟ್‌ಗೆ 454 ರನ್ ಜೊತೆಯಾಟ ನಡೆಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ಜೊತೆಯಾಟ ನಡೆಸಿದ್ದಾರೆ.

►ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗದ ತ್ರಿಶತಕಗಳು

ಎಸೆತ ಆಟಗಾರ ಎದುರಾಳಿ ಸ್ಥಳ ವರ್ಷ

278 ವೀರೇಂದ್ರ ಸೆಹ್ವಾಗ್ ದಕ್ಷಿಣ ಆಫ್ರಿಕಾ ಚೆನ್ನೈ 2008

310 ಹ್ಯಾರಿ ಬ್ರೂಕ್ ಪಾಕಿಸ್ತಾನ ಮುಲ್ತಾನ್ 2024

362 ಮ್ಯಾಥ್ಯೂ ಹೇಡನ್ ಝಿಂಬಾಬ್ವೆ ಪರ್ತ್ 2003

364 ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ಮುಲ್ತಾನ್ 2004

Leave A Reply

Your email address will not be published.