EBM News Kannada
Leading News Portal in Kannada

ಟಿ20 ವಿಶ್ವಕಪ್ | ಶ್ರೀಲಂಕಾ ತಂಡದ ನಿರ್ಗಮನಕ್ಕೆ ನೈಟ್ ಕ್ಲಬ್ ಭೇಟಿ ಕಾರಣವಲ್ಲ : ಕ್ರೀಡಾ ಸಚಿವ | T20 World Cup

0


ಕೊಲಂಬೊ : ರಾಷ್ಟ್ರೀಯ ಕ್ರಿಕೆಟ್ ತಂಡದ ನೈಟ್ ಕ್ಲಬ್‌ಗೆ ಭೇಟಿ ಕುರಿತು ಟೀಕಿಸುವವರ ವಿರುದ್ಧ ಶ್ರೀಲಂಕಾದ ಕ್ರೀಡಾ ಸಚಿವ ಹರಿನ್ ಫೆರ್ನಾಂಡೊ ಸವಾಲೆಸೆದಿದ್ದಾರೆ.

ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಬೇಗನೆ ನಿರ್ಗಮಿಸಲು ನೈಟ್ ಕ್ಲಬ್ ಭೇಟಿ ಕಾರಣ ಎಂದು ಹೇಳುವವರು ಪುರಾವೆಯನ್ನು ಒದಗಿಸಬೇಕು ಎಂದು ಕ್ರೀಡಾ ಸಚಿವರು ಬೇಡಿಕೆ ಇಟ್ಟಿದ್ದಾರೆ.

ಪಂದ್ಯಾವಳಿಯಲ್ಲಿ ಸೂಪರ್-8 ಹಂತಕ್ಕೇರುವಲ್ಲಿ ವಿಫಲವಾಗಿರುವ ಶ್ರೀಲಂಕಾ ತಂಡ ಡಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದಿತ್ತು.

ಗುಂಪಿನಲ್ಲಿರುವ ಇತರ ಎರಡು ತಂಡಗಳಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ಮುಂದಿನ ಸುತ್ತಿಗೇರಲು ಶಕ್ತವಾಗಿದ್ದವು.

ವಿಶ್ವಕಪ್‌ನಿಂದ ಶ್ರೀಲಂಕಾ ತಂಡ ಬೇಗನೆ ನಿರ್ಗಮಿಸಲು ನೈಟ್ ಕ್ಲಬ್ ಭೇಟಿಯೇ ಕಾರಣ ಎನ್ನುವುದನ್ನು ನೀವು ಸಾಬೀತುಪಡಿಸಬೇಕು ಎಂದು ನಾನು ಸವಾಲು ಹಾಕುವೆ. ಅದನ್ನು ಸಾಬೀತುಪಡಿಸಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ತನ್ನ ಪೂರ್ವಾಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಫೆರ್ನಾಂಡೊ ಹೇಳಿದ್ದಾರೆ.

ತಡರಾತ್ರಿ ತನಕ ನೈಟ್ ಕ್ಲಬ್‌ನಲ್ಲಿ ಕಾಲ ಕಳೆದ ಕಾರಣ ಶ್ರೀಲಂಕಾ ಆಟಗಾರರು ಪ್ರಾಕ್ಟೀಸ್‌ಗೆ ತಡವಾಗಿ ಆಗಮಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

2014ರ ಚಾಂಪಿಯನ್ ಶ್ರೀಲಂಕಾ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಸೋಲನುಭವಿಸಿತ್ತು. ನೇಪಾಳದ ವಿರುದ್ಧ ಪಂದ್ಯ ಮಳೆಗಾಹುತಿಯಾಗಿತ್ತು. ನೆದರ್‌ಲ್ಯಾಂಡ್ಸ್ ವಿರುದ್ಧ ಏಕೈಕ ಗೆಲುವು ದಾಖಲಿಸಿತ್ತು.

Leave A Reply

Your email address will not be published.