EBM News Kannada
Leading News Portal in Kannada

ಭಾರತದ ಸ್ಪಿನ್‌ ದಾಳಿಗೆ ತತ್ತರಿಸಿದ ಇಂಗ್ಲೆಂಡ್‌ 145ಕ್ಕೆ ಆಲೌಟ್‌

0



ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವು ಭಾರತದ ಸ್ಪಿನ್‌ ದಾಳಿಗೆ ತತ್ತರಿಸಿ ಕೇವಲ 145 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆತಿಥೇಯ ಭಾರತಕ್ಕೆ 192 ರನ್​ಗಳ ಗೆಲುವಿನ ಗುರಿ ನೀಡಿದೆ.

ಪಂದ್ಯದ ಮೂರನೇ ದಿನದಂದು ಧ್ರುವ್ ಜುರೆಲ್ ಅವರ ಆಕರ್ಷಕ 90 ರನ್‌ ಕೊಡುಗೆಯಿಂದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 307 ರನ್ ಗೆ ಆಲೌಟ್‌ ಆಗಿತ್ತು. 46 ರನ್‌ ಮುನ್ನಡೆ ಪಡೆದು ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ರವಿಚಂದ್ರನ್‌ ಅಶ್ವಿನ್‌ ಹಾಗೂ ಕುಲದೀಪ್‌ ಯಾದವ್ ಅವರ ಸ್ಪಿನ್‌ ದಾಳಿಗೆ ತತ್ತರಿಸಿ 145 ರನ್​ ಗೆ ಆಲೌಟ್‌ ಆಯಿತು. ಅಶ್ವಿನ್‌ 5 ವಿಕೆಟ್‌ ಪಡೆದರೆ, ಕುಲದೀಪ್‌ 4 ವಿಕೆಟ್‌ ಪಡೆದು ಮಿಂಚಿದರು. ಮತ್ತೊಬ್ಬ ಸ್ಪಿನ್ನರ್ ರವೀಂದ್ರ ಜಡೇಜಾ ಒಂದು ವಿಕೆಟ್‌ ಪಡೆದು ಕೊಡುಗೆ ನೀಡಿದರು.

192 ರನ್‌ ಗುರಿ ಪಡೆದ ಭಾರತ ಯಾವುದೇ ವಿಕೆಟ್‌ ನಷ್ಟವಿಲ್ಲದೆ 40 ರನ್‌ ಗಳಿಸಿದೆ.

Leave A Reply

Your email address will not be published.