ಅಹ್ಮದಾಬಾದ್ : ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 283 ರನ್ ಗಳ ಗುರಿ ಬೆನ್ನತ್ತಿರುವ ನ್ಯೂಝಿಲಾಂಡ್ 4 ಓವರ್ ಗಳಲ್ಲಿ 19 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ. ಡೇವಿಡ್ ಕಾನ್ವೆ 11, ರಚಿನ್ ರವೀಂದ್ರ 9 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ನ ಬೌಲರ್ ಸ್ಯಾಮ್ ಕ್ಯೂರನ್ ತಮ್ಮ ಮೊದಲನೇ ಓವರ್ ನಲ್ಲಿ ವಿಲ್ ಯಂಗ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವ ಮೂಲಕ ನ್ಯೂಝಿಲಾಂಡ್ ಗೆ ಆರಂಭಿಕ ಆಘಾತ ನೀಡಿದ್ದಾರೆ.