EBM News Kannada
Leading News Portal in Kannada

‘ವಲಸಿಗ ಕಾರ್ಮಿಕರಿಗೆ ಅಗತ್ಯ ಸೇವೆಯೊಂದಿಗೆ ಜೀವಕ್ಕೂ ಭದ್ರತೆ ನೀಡಿ‘ – ರಾಜ್ಯ ಸರ್ಕಾರಗಳಿಗೆ ಕೇಂದ್ರ ಆದೇಶ

0

ನವದೆಹಲಿ(ಏ.19): ಪ್ರಧಾನಿ ನರೇಂದ್ರ ಮೋದಿಯವರ ಆದೇಶದ ಮೇರೆಗೆ ಜಾರಿಯಲ್ಲಿರುವ ಕೊರೋನಾ ಲಾಕ್​​ಡೌನ್​​ ಪರಿಣಾಮ ಐಟಿ-ಬಿಟಿ ಸೇರಿದಂತೆ ವಿವಿಧ ವಲಯಗಳ ಉದ್ಯಮಗಳು ಸ್ಥಗಿತಗೊಂಡಿದೆ. ಅಗತ್ಯ ಸಾಮಾಗ್ರಿಗಳನ್ನು ಪೂರೈಸುವ ಅಂಗಡಿಗಳ ಹೊರತಾಗಿ ಇತರ ಎಲ್ಲವೂ ಬಾಗಿಲು ಮುಚ್ಚಿವೆ. ಹಾಗಾಗಿಯೇ ದೇಶದ್ಯಂತ ಕೋಟ್ಯಾಂತರ ವಲಸಿಗ ಕಾರ್ಮಿಕರು, ಸಣ್ಣ ಪುಟ್ಟ ಉದ್ದಿಮೆದಾರರು ಮುಂದೇನು ಎಂದು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರವೂ ಕೆಲವೊಂದು ಮಹತ್ವದ ಘೋಷಣೆಗಳನ್ನು ಮಾಡಿದರೂ ವಲಸಿಗ ಕಾರ್ಮಿಕರ ಪರಿಸ್ಥಿತಿಯಂತೂ ಹಾಗೆಯೇ ಇದೆ. ಹೀಗಿರುವಾಗಲೇ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವೂ ಭಾನುವಾರ ಅಂದರೆ ಇಂದು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್​ಒಪಿ) ಬಿಡುಗಡೆ ಮಾಡಿದ್ದು, ವಲಸಿಗ ಕಾರ್ಮಿಕರ ವಿಚಾರದಲ್ಲಿ ಇದನ್ನು ಅನುಸರಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್​​ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್​​ಡೌನ್​​ ಜಾರಿಗೊಳಿಸಿ ಎಲ್ಲವನ್ನು ಬಂದ್​ ಮಾಡಿದೆ. ಇದರಿಂದ ಕಾರ್ಮಿಕರು ಊಟಕ್ಕೂ ದುಡ್ಡಿಲ್ಲದೇ ಪರದಾಡುವಂತಾಗಿದೆ. ಹಾಗಾಗಿ ಇವರ ಜೀವಕ್ಕೂ ಭದ್ರತೆ ನೀಡುವ ಸಲುವಾಗಿ ಈ ಎಸ್​ಒಪಿ (standard operating procedure) ಅನುಸರಿಸಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Leave A Reply

Your email address will not be published.