EBM News Kannada
Leading News Portal in Kannada

ಬೆಂಗಳೂರು ನಗರದ ಮೇಲೆ ಹಿಡಿತ ಕಳೆದುಕೊಳ್ಳುತ್ತಿದೆಯಾ ಬಿಜೆಪಿ? ಕಾರಣ ಏನು?

0

ಬೆಂಗಳೂರು: ಬೆಂಗಳೂರು ನಗರದಲ್ಲಿ ನಡೆದ ಕಳೆದ ಮೂರು ಚುನಾವಣೆಗಳ ಫಲಿತಾಂಶಗಳನ್ನು ಗಣನೆಗೆ ತೆಗೆದುಕೊಂಡರೇ ಭಾರತೀಯ ಜನತಾ ಪಕ್ಷ ಕ್ರಮೇಣವಾಗಿ ನಗರದ ಮೇಲೆ ತನ್ನ ರಾಜಕೀಯ ಹಿಡಿತ ಕಳೆದುಕೊಳ್ಳುತ್ತಿದೆಯೇ ಎಂಬ ಸಂದೇಹ ಮೂಡುತ್ತಿದೆ.

ಬೆಂಗಳೂರಿನ 28 ವಿಧಾನ ಸಭೆ ಕ್ಷೇತ್ರಗಳ ಪೈಕಿ 2008 ರಲ್ಲಿ ಬಿಜೆಪಿ 17 ಸ್ಥಾನ ಗಳಿಸಿತ್ತು, ಆದರೆ 2018ರ ವಿಧಾನ ಸಭೆ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಕೇವಲ 11 ಸ್ಥಾನ ಪಡೆದಿದೆ, ಮತ್ತೊಂದು ಕ್ಷೇತ್ರವಾದ ಜಯನಗರದಲ್ಲಿ ಚುನಾವಣೆ ಇನ್ನೂ ನಡೆಯಬೇಕಿದೆ. ಬಿಜೆಪಿ ಹಂತ ಹಂತವಾಗಿ ಬೆಂಗಳೂರಿನ ಮೇಲೆ ಹಿಡಿತ ಕಳೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡಿದೆ.

ನಗರದಲ್ಲಿ ಬಿಜೆಪಿ ಈ ಬಾರಿ ನಿರೀಕ್ಷೆಯ ಮಟ್ಟದಲ್ಲಿ ಯಶಸ್ವಿ ಗಳಿಸಲಿಲ್ಲ ಎಂಬುದನ್ನು ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಪಡೆಯಲು ಕಾರಣ ಎನು ಎಂಬುದನ್ನು ವಿಶ್ಲೇ,ಷಕರು ವಿವರಿಸಿದ್ದಾರೆ.

ಚುನಾಯಿತ ಬಿಜೆಪಿ ಶಾಸಕರ ಪ್ರಭಾವ ಕಡಿಮೆಯಾಗಿದ್ದರಿಂದ ಕಾಂಗ್ರೆಸ್ ತನ್ನ ಮೇಲುಗೈ ಸಾಧಿಸಲು ಸಹಾಯವಾಗಿದೆ, ಬೆಂಗಳೂರು ನಗರದ ಚುನಾವಣೆಗೆ ಕಾಂಗ್ರೆಸ್ ತಕ್ಕ ಮಟ್ಟಿನ ತಯಾರಿ ಕೂಡ ನಡೆಸಿತ್ತು, ಪಕ್ಷಕ್ಕಿಂತ ವಯಕ್ತಿಕ ವರ್ಚಸ್ಸಿನ ಮೇಲೆ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಪ್ರೊ, ಎ ನಾರಾಯಣ ಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಈ ನಾಯಕರುಗಳಿಗೆ ನಗರ ಪ್ರದೇಶದ ಮತದಾರರ ಮನಸ್ಥಿತಿ ತಿಳಿದಿಲ್ಲ, ಗೆಲುವಿಗಾಗಿ ತಮ್ಮ ವೋಟ್ ಬ್ಯಾಂಕ್ ಬೆಳೆಸುವ ಕಸರತ್ತು ನಡೆಸಿತು ಅಷ್ಟೇ, ನಗರ ಮತದಾರರ ನಿರ್ಧಾರ ಬಿಜೆಪಿ ನಾಯಕರ ವಿರುದ್ಧ ನಕಾರಾತ್ಮವಾಗಿ ಇದ್ದ ಪರಿಣಾಮ ಬಿಜೆಪಿಗೆ ಸೋಲು ಆಯಿತು ಎಂದು ಹೇಳಿದ್ದಾರೆ.

ಕರ್ನಾಟಕ ಬಿಜೆಪಿಯಲ್ಲಿ ಹಲವು ಆಂತರಿಕ ಸಮಸ್ಯೆ ಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆ, ಅದನ್ನು ಹೊರತು ಪಡಿಸಿದರೇ ಹೆಚ್ಚಿನ ಜನರು ನಾಯಕರಲ್ಲಿ ಉದ್ಯಮಶೀಲತೆ ಬಯಸುತ್ತಾರೆ, ಬಿಜೆಪಿ ನೀಡಿದ ಭರವಸೆ ಕೆಲಸ ಮಾಡಲಿಲ್ಲ, ನಗರದ ಯುವ ಮತದಾರರಲ್ಲಿ ಭರವಸೆ ಮೂಡಿಸುವ ಕೆಲಸ ಮಾಡಲಿಲ್ಲ ಎಂದು ರಾಜಕೀಯ ವಿಶ್ಲೇಷಕ ಹರೀಶ್ ರಾಮಸ್ವಾಮಿ ತಿಳಿಸಿದ್ದಾರೆ,ಟ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಬ್ಬರ ಭಾಷಣ ಮಾತ್ರ ಮತದಾರರನ್ನು ಸೆಳೆಯಲು ಸಾಧ್ಯವಾಯಿತು. ಬೆಂಗಳೂರು ನಗರದಲ್ಲಿ ಕೊನೆ ಕ್ಷಣದಲ್ಲಿ ಪ್ರಚಾರ ಮಾಡಿದ್ದು ಕೂಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ ಆರೋಪಿಸಿದ್ದಾರೆ, ಕೆಲ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಂತ್ರದಿಂದಾಗಿ ಬಿಜೆಪಿ ಮತದಾರರ ಹೆಸರುಗಳು ನಾಪತ್ತೆಯಾಗಿವೆ, ಅಧಿಕಾರಕ್ಕೆ ಬರಬೇಕೆಂಬ ದುರುದ್ದೇಶದಿಂದ ಕಾಂಗ್ರೆಸ್ ಹೀಗೆ ಮಾಡಿದೆ ಎಂದು ದೂರಿದ್ದಾರೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಿಷನ್-25 ಬಗ್ಗೆ ಪ್ರತಿಕ್ರಿಯಿಸಿದ ಅವರು ಕನಿಷ್ಠ ಪಕ್ಷ 20 ಸ್ಥಾನ ಗಳಿಸಲು ನಾವು ಪ್ರಯತ್ನಿಸಿದ್ದೆವು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

Leave A Reply

Your email address will not be published.