EBM News Kannada
Leading News Portal in Kannada

ಮಹಾರಾಷ್ಟ್ರ | ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಹರಿದು ಕನಿಷ್ಠ 6 ಮಂದಿ ಮೃತ್ಯು

0



ಮುಂಬೈ: ಬುಧವಾರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ಹರಿದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಹಲವಾರು ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಜಲಗಾಂವ್‌ನ ಪಚೋರಾ ಪಟ್ಟಣದ ಪರಂಡ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ರೈಲ್ವೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದಾರೆ.

ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಪುಷ್ಪಕ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರು ಹಳಿಗಳ ಮೇಲೆ ಗಾಬರಿಯಿಂದ ಓಡಿದಾಗ ಈ ಘಟನೆ ಸಂಭವಿಸಿದೆ.

ಬೆಂಕಿಯ ಬಗ್ಗೆ ವದಂತಿಯನ್ನು ಇನ್ನೂ ದೃಡೀಕರಿಸಲಾಗಿಲ್ಲ ಎಂದು ಜಲಗಾಂವ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave A Reply

Your email address will not be published.