ಕೊಚ್ಚಿ: ಮಲಯಾಳಂ ನಟಿ ಹನಿ ರೋಸ್ ವಿರುದ್ಧ ಅವಹೇಳನಾಕಾರಿ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ಬಾಬಿ ಚೆಮ್ಮನೂರ್ ಅವರಿಗೆ ಕೇರಳ ಹೈಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ಪಿ ವಿ ಕುಂಞಿ ಕೃಷ್ಣನ್ ಅವರ ಪೀಠ ಬಾಬಿ ಚೆಮ್ಮನೂರ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಬಾಬಿ ಚೆಮ್ಮನೂರ್ ಅವರ ಪಾಸ್ ಪೋರ್ಟ್ ಈಗಾಗಲೇ ನ್ಯಾಯಾಲಯದಲ್ಲಿ ಠೇವಣಿಯಿಡಲಾಗಿದೆ ಮತ್ತು ತನಿಖೆಯ ಸಮಯದಲ್ಲಿ ಅವರು ಪೊಲೀಸರಿಗೆ ಸಹಕರಿಸಲಿದ್ದಾರೆ. ಚೆಮ್ಮನೂರ್ ಅವರು ಮಹಿಳಾ ನಟಿಯ ಬಗ್ಗೆ ನೀಡಿದ ಹೇಳಿಕೆಗೆ ಭಿನ್ನಾರ್ಥ ಇಲ್ಲ ಎಂದು ಹೇಳಲಾಗದು ಎಂದು ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ.
ನಟಿ ಹನಿ ರೋಸ್ ವಿರುದ್ಧ ಅವಹೇಳನಾಕಾರಿ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಜ.8ರಂದು ಬಾಬಿ ಚೆಮ್ಮನೂರ್ ಅವರನ್ನು ಬಂಧಿಸಲಾಗಿತ್ತು. ಜನವರಿ 9ರಂದು ಎರ್ನಾಕುಲಂ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಾಬಿ ಚೆಮ್ಮನೂರ್ ಜಾಮೀನು ಅರ್ಜಿಯನ್ನು ವಜಾಗೊಳಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಇದರಿಂದಾಗಿ ಕೊಚ್ಚಿಯ ಜಿಲ್ಲಾ ಕಾರಾಗೃಹದಲ್ಲಿದ್ದ ಬಾಬಿ ಚೆಮ್ಮನೂರ್ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.