ಜೈಪುರ: ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಬೆಂಗಾವಲು ವಾಹನ ಪಲ್ಟಿಯಾಗಿ, ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಪಾಲಿ ಜಿಲ್ಲೆಯ ಮುಂಡರ ಗ್ರಾಮದ ಬಳಿ ನಡೆದಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿ ಪೊಲೀಸ್ ವರಿಷ್ಠಾಧಿಕಾರಿ ಚುನಾರಾಮ್ ಜತ್, ರಾಜಸ್ಥಾನದ ಮಾಜಿ ಸಚಿವ ಓಟರಾಮ್ ದೇವಾಸಿ ಅವರನ್ನು ಭೇಟಿ ಮಾಡಲು ವಸುಂಧರಾ ರಾಜೇ ರಸ್ತೆ ಮಾರ್ಗವಾಗಿ ಪಾಲಿ ಜಿಲ್ಲೆಯ ಮುಂಡರ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಬೈಕೊಂದು ಡಿಢೀರನೆ ಅಡ್ಡ ಬಂದಿದ್ದರಿಂದ, ಬೈಕ್ ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಬೆಂಗಾವಲು ವಾಹನ ಪಲ್ಟಿ ಹೊಡೆದಿದೆ ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಬೆಂಗಾವಲು ವಾಹನದಲ್ಲಿ ಪ್ರಯಾಣಿಸುತ್ತಿದ್ದ ಏಳು ಮಂದಿ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.