EBM News Kannada
Leading News Portal in Kannada

ರಕ್ಷಣಾ ಕಾರ್ಯಾರಚಣೆ ಯಶಸ್ವಿ; ಕೊಳವೆಬಾವಿಗೆ ಬಿದ್ದಿದ್ದ ಬಾಲಕ ಹೊರತೆಗೆದ ಬಳಿಕ ಮೃತ್ಯು

0


ಜೈಪುರ: ಆಟವಾಡುತ್ತಿದ್ದಾಗ 150 ಅಡಿ ಆಳದ ಕೊಳವೆಬಾವಿಗೆ ಬಿದ್ದ ಬಾಲಕನನ್ನು 55 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ರಕ್ಷಿಸಿದ ಘಟನೆ ರಾಜಸ್ಥಾನದ ದಸೂವಾದಿಂದ ವರದಿಯಾಗಿದೆ. ಆದರೆ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ಬಾಲಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಕಾರ್ಯಾಚರಣೆ ಆರಂಭವಾಗಿ 57 ಗಂಟೆ ಬಳಿಕ ಬಾಲಕ ಮೃತಪಟ್ಟಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ. 55 ಗಂಟೆಗಳ ಕಾರ್ಯಾಚರಣೆಯಲ್ಲಿ ಬಾಲಕನನ್ನು ಕೊಳವೆಬಾವಿಯಿಂದ ಯಶಸ್ವಿಯಾಗಿ ಹೊರತೆಗೆಯಲಾಗಿತ್ತು.

160 ಅಡಿ ಆಳದಲ್ಲಿ ನೀರಿನ ಮಟ್ಟ ಇದ್ದುದು ಹಾಗೂ ಅಂತರ್ಜಲ ಚಿಮ್ಮುವಿಕೆ ಕಾರಣದಿಂದ ಕ್ಯಾಮೆರಾದಲ್ಲಿ ಬಾಲಕನ ಚಲನ ವಲನವನ್ನು ಸೆರೆ ಹಿಡಿಯುವುದೂ ಸಾಧ್ಯವಾಗದೇ ಇದ್ದುದೂ ಸೇರಿದಂತೆ ರಕ್ಷಣಾ ತಂಡ ಅಸಂಖ್ಯಾತ ಸವಾಲುಗಳನ್ನು ಎದುರಿಸಿತ್ತು.

ಸೋಮವಾರ ಮಧ್ಯಾಹ್ನ ಸಮಯದಲ್ಲಿ ಆರ್ಯನ್ (5) ಎಂಬ ಬಾಲಕ ಮೈದಾನದಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಮಧ್ಯಾಹ್ನ 3 ಗಂಟೆಯ ವೇಳೆಗೆ ಆತ ಕೊಳವೆಬಾವಿಗೆ ಬಿದಿದ್ದ. ಒಂದು ಗಂಟೆ ಬಳಿಕ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದ್ದು, ಡ್ರಿಲ್ಲಿಂಗ್ ಮೆಷಿನ್ ಗಳ ಸಹಾಯದಿಂದ ಕೊಳವೆಬಾವಿ ಪಕ್ಕದಲ್ಲಿ ಪರ್ಯಾಯವಾಗಿ ದೊಡ್ಡ ಹೊಂಡವನ್ನು ಕೊರೆಯಲಾಯಿತು. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿ, ಬಾಲಕನನ್ನು ಸುರಕ್ಷಿತವಾಗಿ ಹೊರತರಲು ಹಗಲು-ರಾತ್ರಿ ಶ್ರಮಿಸಿದ್ದರು.

ಕೊಳವೆ ಮೂಲಕ ಬಾಲಕನಿಗೆ ನಿರಂತರವಾಗಿ ಆಮ್ಲಜನಕ ಪೂರೈಸಲಾಗುತ್ತಿತ್ತು. ಕೊಳವೆಬಾವಿಯ ಒಳಕ್ಕೆ ಕ್ಯಾಮೆರಾ ಇಳಿಸಿ ಬಾಲಕನ ಚಲನ ವಲನದ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ಬಾಲಕನನ್ನು ರಕ್ಷಿಸುವ ಸಲುವಾಗಿ ಮಂಗಳವಾರ 150 ಅಡಿ ಆಳದ ಸುರಂಗವನ್ನು ಎಕ್ಸ್ಸಿಎಂಜಿ 180 ಪೈಲಿಂಗ್ ರಿಗ್ ಯಂತ್ರದಲ್ಲಿ ಕೊರೆಯಲಾಗಿತ್ತು.

Leave A Reply

Your email address will not be published.