EBM News Kannada
Leading News Portal in Kannada

ಫೆಂಗಲ್ ಚಂಡಮಾರತ | ಲ್ಯಾಂಡಿಂಗ್ ಗೆ ಪರದಾಡಿದ ಇಂಡಿಗೋ ವಿಮಾನ; ಭಯಾನಕ ವೀಡಿಯೊ ವೈರಲ್

0


ತಮಿಳುನಾಡು: ಫೆಂಗಲ್ ಚಂಡಮಾರತದಿಂದ ಇಂಡಿಗೋ ವಿಮಾನ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಲ್ಲಿ ಕಡಿಮೆ ಗೋಚರತೆಯಿಂದಾಗಿ ಲ್ಯಾಂಡಿಂಗ್ ಗೆ ಪರದಾಟ ನಡೆಸಿದ್ದು, ಈ ಕುರಿತ ಭಯಾನಕ ವೀಡಿಯೊ ವೈರಲ್ ಆಗಿದೆ.

ಲ್ಯಾಂಡಿಂಗ್ ಕುರಿತ ಭಯಾನಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಕುರಿತ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ ಅಂತಹ ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಲು ವಿಮಾನಗಳಿಗೆ ಏಕೆ ಅನುಮತಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಪ್ರಶ್ನಿಸಿದ್ದಾರೆ.

ಪ್ರತಿಕೂಲ ಹವಾಮಾನದಿಂದ ಒಂದು ವಿಮಾನದ ಲ್ಯಾಂಡಿಂಗ್ ನ್ನು ಕೊನೆಯ ಕ್ಷಣದಲ್ಲಿ ವರ್ಗಾಯಿಸಲಾಗಿದೆ. ಮತ್ತೊಂದು ವಿಮಾನವು ಸತತ ಪ್ರಯತ್ನಗಳ ಮೂಲಕ ಸುರಕ್ಷಿತವಾಗಿ ಲ್ಯಾಂಡಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದೆ. ಲ್ಯಾಂಡಿಂಗ್ ಗೆ ವಿಮಾನಗಳ ಪರದಾಟವು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿತ್ತು.

ಫೆಂಗಲ್ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದು, ಭಾರಿ ಮಳೆ ಮತ್ತು ಮಳೆ ಸಂಬಂಧಿ ಅನಾಹುತಗಳಿಂದ ಚೆನ್ನೈ ನಗರದ ವಿವಿಧೆಡೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ. ಶನಿವಾರ ಚೆನ್ನೈ ನಗರದ ವಿವಿಧೆಡೆಗಳಲ್ಲಿ 4 ಸೆಂಟಿ ಮೀಟರ್‌ ನಿಂದ 13 ಸೆಂಟಿ ಮೀಟರ್‌ ವರೆಗೆ ಮಳೆ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ನಾಲ್ವರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ 10.30ರ ವೇಳೆಗೆ ಚಂಡಮಾರುತ ಪುದುಚೇರಿ ಬಳಿ ತಮಿಳುನಾಡು ಕರಾವಳಿಯನ್ನು ದಾಟಿದೆ.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ.



Leave A Reply

Your email address will not be published.