ವಿಧಾನ ಸಭೆ ಚುನಾವಣೆ | ಮಹಾರಾಷ್ಟ್ರದಲ್ಲಿ ಶೇ. 58.43, ಜಾರ್ಖಂಡ್‌ನಲ್ಲಿ ಶೇ. 67.59 ಮತದಾನ | Legislative Assembly Election
ಮುಂಬೈ : ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನ ವಿಧಾನ ಸಭೆ ಚುನಾವಣೆಯ ಮತದಾನದ ಬುಧವಾರ ಶಾಂತಿಯುತವಾಗಿ ನಡೆಯಿತು. ಮಹಾರಾಷ್ಟ್ರದಲ್ಲಿ ಶೇ. 58.43 ಹಾಗೂ ಜಾರ್ಖಂಡ್ ನಲ್ಲಿ ಶೇ. 67.59 ಮತದಾನವಾಗಿದೆ.
ಮಹಾರಾಷ್ಟ್ರ ವಿಧಾನ ಸಭೆಯ ಎಲ್ಲಾ 288 ಕ್ಷೇತ್ರಗಳಿಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಿತು. ಜಾರ್ಖಂಡ್‌ನಲ್ಲಿ 43 ವಿಧಾನ ಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು ಮೊದಲ ಹಂತದ ಮತದಾನ ನಡೆದಿತ್ತು. ಇಂದು ಉಳಿದ 38 ಕ್ಷೇತ್ರಗಳಿಗೆ ಮತದಾನ ನಡೆಯಿತು.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ಎರಡೂ ರಾಜ್ಯಗಳು ಬಿಜೆಪಿ ನೇತೃತ್ವದ ಎನ್‌ಡಿಎ (ಮಹಾರಾಷ್ಟ್ರದಲ್ಲಿ ಮಹಾಯುತಿ) ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ (ಮಹಾರಾಷ್ಟ್ರದಲ್ಲಿ ಮಹಾ ವಿಕಾಸ ಅಘಾಡಿ)ದ ನಡುವಿನ ತೀವ್ರ ಹಣಾಹಣಿಗೆ ಸಾಕ್ಷಿಯಾಗಿವೆ.
ಈ ಎರಡು ರಾಜ್ಯಗಳ ವಿಧಾಸಭೆ ಚುನಾವಣೆಗಳೊಂದಿಗೆ ಉತ್ತರಪ್ರದೇಶ, ಪಂಜಾಬ್, ಕೇರಳ ಹಾಗೂ ಉತ್ತರಾಖಂಡದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಕೂಡ ಬುಧವಾರ ನಡೆಯಿತು.