EBM News Kannada
Leading News Portal in Kannada

ಕೇಂದ್ರದಿಂದ 200 ಕೋಟಿ ರೂ.ವೆಚ್ಚದಲ್ಲಿ 21ನೇ ಜಾನುವಾರು ಗಣತಿಗೆ ಚಾಲನೆ

0


ಹೊಸದಿಲ್ಲಿ : 200 ಕೋಟಿ ರೂ.ವೆಚ್ಚದಲ್ಲಿ ಮುಂದಿನ ವರ್ಷದ ಫೆಬ್ರವರಿಯವರೆಗೆ ನಡೆಯಲಿರುವ 21ನೇ ಜಾನುವಾರು ಗಣತಿಗೆ ಶುಕ್ರವಾರ ಚಾಲನೆ ನೀಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರು, ನಿಖರ ದತ್ತಾಂಶಗಳ ಲಭ್ಯತೆಯು ಜಾನುವಾರ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಲು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು ನೆರವಾಗಲಿದೆ ಎಂದು ಹೇಳಿದರು.

ಸಾಂಕ್ರಾಮಿಕಗಳ ವಿರುದ್ಧ ಸನ್ನದ್ಧತೆಗಾಗಿ ಮತ್ತು ತ್ವರಿತ ಪ್ರತಿಕ್ರಿಯೆಗಾಗಿ ಭಾರತದಲ್ಲಿ ಜಾನುವಾರುಗಳ ಆರೋಗ್ಯ ಸುರಕ್ಷತೆ ವ್ಯವಸ್ಥೆಯನ್ನು ಬಲಗೊಳಿಸಲು 2.5 ಕೋಟಿ ಡಾಲರ್‌ಗಳ ‘ಸಾಂಕ್ರಾಮಿಕ ನಿಧಿ ಯೋಜನೆ’ಗೂ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಾನುವಾರು ಗಣತಿಯನ್ನು ಸಂಪೂರ್ಣ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಡೆಸುವುದಕ್ಕೆ ಒತ್ತು ನೀಡಿದರು. ನಿಯಮಿತವಾಗಿ ಜಾನುವಾರು ಗಣತಿ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಡೆಸುವಂತೆ ತನ್ನ ಸಚಿವಾಲಯದ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, 200 ಕೋಟಿ ರೂ.ವೆಚ್ಚದಲ್ಲಿ ಜಾನುವಾರು ಗಣತಿಯನ್ನು ನಡೆಸಲಾಗುವುದು ಮತ್ತು ಸಂಪೂರ್ಣ ವೆಚ್ಚವನ್ನು ಕೇಂದ್ರ ಸರಕಾರವು ಭರಿಸಲಿದೆ. ಗಣತಿ ವರದಿಯು ಮುಂದಿನ ವರ್ಷ ಲಭ್ಯವಾಗಲಿದೆ ಎಂದು ತಿಳಿಸಿದರು.

Leave A Reply

Your email address will not be published.