EBM News Kannada
Leading News Portal in Kannada

ಅಟಲ್ ಸೇತುವಿನಿಂದ ಜಿಗಿದು ಮುಂಬೈ ಉದ್ಯಮಿ ಆತ್ಮಹತ್ಯೆ

0



ಮುಂಬೈ : ಮುಂಬೈಯ ಮಾಟುಂಗದ 52 ವರ್ಷದ ಉದ್ಯಮಿಯೊಬ್ಬರು ಬುಧವಾರ ಅಟಲ್ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಟಲ್ ಸೇತುವೆಯು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಮ್‌ಟಿಎಚ್‌ಎಲ್)ನ ಭಾಗವಾಗಿದೆ.

ಇದಕ್ಕಿಂತಲೂ ಎರಡು ದಿನಗಳ ಹಿಂದೆ ರಾಷ್ಟ್ರೀಕೃತ ಬ್ಯಾಂಕೊಂದರ ಉಪ ಮ್ಯಾನೇಜರ್ ಒಬ್ಬರು ಇದೇ ಅಟಲ್ ಸೇತುವಿನಿಂದ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಮೃತದೇಹವು ಮಂಗಳವಾರ ನವಿ ಮುಂಬೈಯ ಸಮುದ್ರ ದಂಡೆಯಲ್ಲಿ ಪತ್ತೆಯಾಗಿತ್ತು.

ಬುಧವಾರ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯನ್ನು ಫಿಲಿಪ್ ಹಿತೇಶ್ ಶಾ ಎಂಬುದಾಗಿ ಗುರುತಿಸಲಾಗಿದೆ. ಅವರು ಮಾಟುಂಗದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಅವರು ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅದರಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.

‘‘ಉದ್ಯಮಿ ಫಿಲಿಪ್ ಶಾ ಬುಧವಾರ ಬೆಳಗ್ಗೆ ಅಟಲ್‌ಸೇತುವಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ತನ್ನ ಕಾರನ್ನು ಅಟಲ್ ಸೇತುವೆಯಲ್ಲಿ ಚಲಾಯಿಸಿಕೊಂಡು ಬಂದು ಒಂದು ಕಡೆ ನಿಲ್ಲಿಸಿ ಸಮುದ್ರಕ್ಕೆ ಹಾರಿದ್ದಾರೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

Leave A Reply

Your email address will not be published.