ಮಣಿಪುರದಲ್ಲಿ ಭೂವಿವಾದ ಘರ್ಷಣೆಗೆ ಮೂವರು ಬಲಿ | ಕರ್ಫ್ಯೂ ಹೇರಿಕೆ, ಇಂಟರ್‌ನೆಟ್ ಸ್ಥಗಿತ | Three killed in land dispute clash in Manipur
ಇಂಫಾಲ :ಮಣಿಪುರದ ಉ್ರುಲ್ ಜಿಲ್ಲೆಯಲ್ಲಿ ಭೂವಿವಾದಕ್ಕೆ ಸಂಬಂಧಿಸಿ ನಡೆದ ಘರ್ಷಣೆಯಲ್ಲಿ ಬುಧವಾರ ಮೂವರು ಮೃತಪಟ್ಟಿದ್ದಾರೆ. ಘಟನೆಯ ಬಳಿಕ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಸ್ವಚ್ಛಭಾರತ ಅಭಿಯಾನದಡಿ ನಿರ್ಮಲೀಕರಣವಾಗಲಿದ್ದ ನಿವೇಶನವೊಂದರ ಒಡೆತತನಕ್ಕೆ ಸಂಬಂಧಿಸಿ ಹೂನ್‌ಫುನ್ ಹಾಗೂ ಹುಂಗ್‌ಪುಂಗ್ ಗ್ರಾಮಗಳ ನಾಗಾ ಬುಡಕಟ್ಟಿನ ಎರಡು ವಿರೋಧಿ ಗುಂಪುಗಳ ನಡುವೆ ಘರ್ಷಣೆಯುಂಟಾಗಿತ್ತು ಎಂದು ‘ಇಂಡಿಯಾ ಟುಡೇ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಘರ್ಷಣೆಯ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ಅಡಿ ಜನರ ಚಲನವಲನವನ್ನು ನಿಷೇಧಿಸುವ ಆದೇಶವನ್ನು ಹೊರಡಿಸಲಾಗಿದೆ. ಬ್ರಾಡ್‌ಬ್ಯಾಂಡ್ ಸಂಪರ್ಕ ಸೇರಿದಂತೆ ಇಂಟರ್‌ನೆಟ್ ಸೇವೆಗಳನ್ನು ಬುಧವಾರ ಮಧ್ಯಾಹ್ನದಿಂದ 24 ತಾಸುಗಳವರೆಗೆ ನಿಷೇಧಿಸಲಾಏಗಿದೆ ಎಂದು ಆದೇಶವು ತಿಳಿಸಿದೆ.
ಮೇ 2023ರಿಂದೀಚೆಗೆ ಮೈತೆಯಿ ಹಾಗೂ ಕುಕಿ ಸಮುದಾಯಗಳ ನಡುವೆ ಭುಗಿಲೆದ್ದಭೀಕರ ಘರ್ಷಣೆಯಿಂದ ಮಣಿಪುರವು ತತ್ತರಿಸುತ್ತಿದ್ದು, ಈವರೆಗೆ 237ಕ್ಕೂ ಅಧಿಕ ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ.
ಮಣಿಪುರ | ಕುಕಿ ಮುಖಂಡನ ಹತ್ಯೆ
ಮಣಿಪುರದ ಚುರಾಚಂದ್‌ಪುರ ಪಟ್ಟಣದಲ್ಲಿ ಅಜ್ಞಾತ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ನಿಷೇಧಿತ ಯುನೈಟೆಡ್ ಕುಕಿ ನ್ಯಾಶನಲ್ ಆರ್ಮಿ(ಯುಕೆಎನ್‌ಎ) ಗುಂಪಿನ ಸ್ವಘೋಷಿತ ನಗರ ಕಮಾಂಡರ್ ಒಬ್ಬನನ್ನು ಬುಧವಾರ ಗುಂಡಿಕ್ಕಿ ಹತ್ಯೆಗೈದಿದೆ.
ಮೃತ ವ್ಯಕ್ತಿಯನ್ನು ಕಾಪ್ರಾಂಗ್ ಗ್ರಾಮದ ನಿವಾಸಿ ಸಟ್‌ಖೊಹವೊ ಹವೊಕಿಪ್ ಎಂದು ಗುರುತಿಸಲಾಗಿದೆ. ಆತನ ಮೃತದೇಹವು ಬುಧವಾರ ತಡರಾತ್ರಿ, ಆಂಗ್ಲೊ-ಕುಕಿ ಯುದ್ಧ ಸ್ಮಶಾನಭೂಮಿಯ ಪ್ರವೇಶದ್ವಾರದ ಬಳಿಕ ಪತ್ತೆಯಾಗಿದೆ.
ಹವೊಕಿಪ್‌ನ ಹತ್ಯೆಯನ್ನು ವಿವಿಧ ಕುಕಿ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಹವೊಕಿಪ್‌ನನ್ನು ಆತನ ಮನೆಯಿಂದ ಆತನ ಕ್ಷಿುಟುಂಬಿಕರ ಎದುರಿನಲ್ಲೇ ಅಪಹರಿಸಿದ್ದರೆಂದು ಅವು ಆರೋಪಿಸಿವೆ.
ಮಣಿಪುರ | ಇಬ್ಬರು ಯುವಕರ ಅಪಹರಣ ; ಐದು ಜಿಲ್ಲೆಗಳಲ್ಲಿ ಬಂದ್ , ಜನಜೀವನ ಅಸ್ತವ್ಯಸ್ತ
ಇಬ್ಬರು ಯುವಕರ ಅಪಹರಣ ಘಟನೆಗೆ ಸಂಬಂಧಿಸಿ ಮೈತೆಯಿ ಗುಂಪು ಜಂಟಿ ಕಾರ್ಯ ಸಮಿತಿ (ಜೆಎಸಿ) ಬುಧವಾರ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಣಿಪುರದ ಐದು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಬಂದ್ ಹಿನ್ನೆಲೆಯಲ್ಲಿ ಅಂಗಡಿ, ಮುಂಗಟ್ಟಚೆಗಳು ಮುಂಚ್ಚಿದ್ದವು. ಹೆಚ್ಚಿನ ವಾಹನಗಳು ರಸ್ತೆಗಿಳಿಯಲಿಲ್ಲ. ಇಂಫಾಲ ಪೂರ್ವ, ಇಂಫಾಲ ಪಶ್ಟಿಮ, ಬಿಷ್ಣುಪುರ,ಕಾಕ್‌ಚಿಂಗ್ ಹಾಗೂ ತೌಬಾಲ್ ಜಿಲ್ಲೆಗಳಲ್ಲಿ ಪ್ರತಿಭಟನಕಾರರು ರಸ್ತೆ ತಡೆ ನಡೆಸಿದರು ಮತ್ತು ವಾಹನಗಳ ಸಂಚಾರಕ್ಕೆ ತಡೆಯೊಡ್ಡಲು ರಸ್ತೆ ಮಧ್ಯೆ ಟಯರ್‌ಗಳನ್ನು ಸುಟ್ಟುಹಾಕಿದರು.
ಇಂಫಾಲ ಪೂರ್ವ ಜಿಲ್ಲೆಯ ಖುರಾಯಿ ಹಾಗೂ ಲಾಮ್‌ಲಾಂಗ್‌ನಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.