ಅಹ್ಮದಾಬಾದ್: ಗುಜರಾತ್‍ಗೆ ಮೊದಲ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಅಹ್ಮದಾಬಾದ್‍ಗೆ ಆಗಮಿಸಿದ್ದು, ಭಾರತದ ಮೊಟ್ಟಮೊದಲ ವಂದೇ ಮೆಟ್ರೋ ಸೇವೆಗೆ ಚಾಲನೆ ನೀಡುವರು. ಭುಜ್ ಮತ್ತು ಅಹ್ಮದಾಬಧ್ ನಡುವೆ ಈ ರೈಲು ಸಂಚರಿಸಲಿದೆ.
ಈ ಉದ್ಘಾಟನೆ ನೆರವೇರಿಸಿದ ಕೆಲವೇ ಗಂಟೆಗಳಲ್ಲಿ ರೈಲ್ವೆ ಸಚಿವಾಲಯ ಈ ಮೆಟ್ರೊಗೆ ನಮೋಭಾರತ್ ರ‍್ಯಾಪಿಡ್ ರೈಲು ಎಂದು ಮರುನಾಮಕರಣ ಮಾಡಿದೆ. ವರ್ಚುವಲ್ ವಿಧಾನದಲ್ಲಿ ಈ ಚಾಲನಾ ಸಮಾರಂಭ ಸಂಜೆ 4.15ಕ್ಕೆ ನಡೆಯಲಿದೆ.
ಇದು ದೇಶದಲ್ಲಿ ಅಂತರನಗರ ಸಂಚಾರ ವ್ಯವಸ್ಥೆಯನ್ನು ಮರು ವ್ಯಾಖ್ಯಾನಿಸಲಿದೆ. ಇದು ಪ್ರಯಾಣಿಕರ ಆರಾಮಕ್ಕೆ ಅನುಕೂಲವಾಗುವ ಜತೆಗೆ ಕಚ್ ಭಾಗದ ಆರ್ಥಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದು ಎಕ್ಸ್ ನಲ್ಲಿ ವಿವರಿಸಿದೆ.
ಸೆಪ್ಟೆಂಬರ್ 17ರಿಂದ ಇದರ ಸಂಚಾರ ಅಹ್ಮದಾಬಾದ್‍ನಿಂದ ಆರಂಭವಾಗಲಿದ್ದು, ಭುಜ್‍ನಿಂದ ಸೆಪ್ಟೆಂಬರ್ 18ರಂದು ಆರಂಭವಾಗಲಿದೆ.