ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಹಾಗೂ ದಿಲ್ಲಿಯ ಚಾಂದನಿ ಚೌಕ್ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಹರ್ಷವರ್ಧನ್ ಅವರು ರಾಜಕೀಯವನ್ನು ತೊರೆಯುವ ತನ್ನ ನಿರ್ಧಾರವನ್ನು ರವಿವಾರ ಪ್ರಕಟಿಸಿದ್ದಾರೆ.
ಬಿಜೆಪಿ ಶನಿವಾರ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಚಾಂದನಿ ಚೌಕ್ ಕ್ಷೇತ್ರದಿಂದ ಹರ್ಷವರ್ಧನ ಅವರನ್ನು ಕೈಬಿಟ್ಟು ಪ್ರವೀಣ್ ಖಂಡೇಲವಾಲ್‌ರನ್ನು ಹೆಸರಿಸಿದೆ.