Padarayanapura Riot: ಪಾದರಾಯನಪುರ ಗಲಭೆ; ಯಾರೋ ಮಾಡಿದ ಕೃತ್ಯಕ್ಕೆ ಇಡೀ ಸಮಾಜವನ್ನು ದೂಷಿಸುವುದು ಸರಿಯಲ್ಲ; ಡಿಕೆಶಿ
ಬೆಂಗಳೂರು (ಏಪ್ರಿಲ್ 20); ನಿನ್ನೆ ರಾತ್ರಿಯಿಂದ ಚರ್ಚೆಯ ವಿಷಯವಾಗಿರುವ ಪಾದರಾಯನಪುರ ಗಲಾಟೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಯಾರೋ ಕೆಲವರು ಮಾಡಿದ ಕೃತ್ಯಕ್ಕೆ ಒಂದು ಇಡೀ ಸಮಾಜವನ್ನು ದೂಷಿಸುವುದು ಮತ್ತು ನಾಯಕರು ಪ್ರಚೋಧನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾದರಾಯನಪುರ ಗಲಾಟೆ ಸಂಬಂಧಿತ ಮುಸ್ಲಿಂ ನಾಯಕರ ಸಭೆ ನಡೆಸಿದ ಬಳಿಕ ಮಾತನಾಡಿರುವ ಡಿ.ಕೆ. ಶಿವಕುಮಾರ್, “ಯಾರೋ ವ್ಯಕ್ತಿಗಳು ಮಾಡಿದ ಕೃತ್ಯಕ್ಕೆ ಸಮಾಜವನ್ನು ದೋಷಿಸುವುದು ಸರಿಯಲ್ಲ. ಪಾದರಾಯನಪುರ ಘಟನೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಸರ್ಕಾರ ತೆಗೆದುಕೊಳ್ಳುವ ಎಲ್ಲಾ ಒಳ್ಳೆ ಯ ನಿರ್ಧಾರಗಳಿಗೆ ನಾವು ಸಹಕಾರ ಕೊಡುತ್ತೇವೆ.
ಆದರೆ, ನಾವು ಎಷ್ಟೇ ಸಹಕಾರ ನೀಡುತ್ತಿದ್ರೂ, ಸಚಿವರು ಮತ್ತು ಶಾಸಕರ ಹೇಳಿಕೆಗಳನ್ನೂ ಗಮನಿಸಿ. ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ಪ್ರಚೋಧನಾಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಅದರೆ, ಬಿಜೆಪಿ ಪಕ್ಷದ ನಾಯಕರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಸಿಎಂ ಬಿಎಸ್‌ವೈ ಗೆ ಮನವಿ ಮಾಡಿದ್ದಾರೆ.