EBM News Kannada
Leading News Portal in Kannada

ಚಿಕ್ಕಮಗಳೂರು | ಸಿ.ಟಿ.ರವಿ ಮೆರವಣಿಗೆ ವೇಳೆ ಆ್ಯಂಬುಲೆನ್ಸ್‌ಗಳ ದುರ್ಬಳಕೆ ; ಚಾಲಕರು, ಮಾಲಕರ ವಿರುದ್ಧ ಎಫ್‍ಐಆರ್

0



ಚಿಕ್ಕಮಗಳೂರು : ಶನಿವಾರ ಮಧ್ಯರಾತ್ರಿ ಸಿ.ಟಿ ರವಿ ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದು, ಈ ವೇಳೆ ಅದ್ದೂರಿ ಸ್ವಾಗತ ಮಾಡಿದ ಕಾರ್ಯಕರ್ತರು ಯಡವಟ್ಟು ಮಾಡಿಕೊಂಡಿದ್ದಾರೆ. ಮೆರವಣಿಗೆ ವೇಳೆ ಆ್ಯಂಬುಲೆನ್ಸ್‌ಗಳ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಕೃಷ್ಣ ಗ್ರೂಪ್‍ನ 7 ಆ್ಯಂಬುಲೆನ್ಸ್‌ ಚಾಲಕರು ಮತ್ತು ಮಾಲಕರ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶನಿವಾರ ರಾತ್ರಿ ಸಿ.ಟಿ.ರವಿ ನಗರಕ್ಕೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಭರ್ಜರಿ ಮೆರವಣಿಗೆಯೊಂದಿಗೆ ಅವರನ್ನು ಕರೆತಂದಿದ್ದಾರೆ. ಮೆರವಣಿಗೆ ಸಾಗಿ ಬರುತ್ತಿದ್ದ ಮಾರ್ಗದಲ್ಲಿ ಆ್ಯಂಬುಲೆನ್ಸ್‌ ಗಳ ಟಾಪ್ ಲೈಟ್ ಆನ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ. ಆ್ಯಂಬುಲೆನ್ಸ್‌ನಲ್ಲಿ ರೋಗಿಗಳಿಲ್ಲದಿದ್ದರೂ ಕರ್ಕಶ ಹಾರ್ನ್ ಹಾಕಿ ಜನರಲ್ಲಿ ಭೀತಿ ಹುಟ್ಟಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಚಿಕ್ಕಮಗಳೂರು ನಗರಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಮೋಟಾರು ವಾಹನ ಕಾಯ್ದೆ ಉಲ್ಲಂಘನೆ, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಆರೋಪದ ಮೇರೆಗೆ ಆ್ಯಂಬುಲೆನ್ಸ್‌ಗಳ ಚಾಲಕರು, ಮಾಲಕರ ಮೇಲೆ ಎಫ್‍ಐಆರ್ ದಾಖಲಾಗಿದೆ.

Leave A Reply

Your email address will not be published.