ಬೆಳಗಾವಿ : “ಪರಿಷತ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಬಹಳ ಕೆಟ್ಟ ಪದ ಬಳಸಿದ್ದಾರೆ ಎಂದು ನಮ್ಮ ಸದಸ್ಯರು ಬಂದು ಹೇಳಿದ್ದಾರೆ. ಅಲ್ಲದೆ, ರವಿ ಅವರು ಬಳಸಿರುವ ಪದ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಸದಸ್ಯ ಸಿಟಿ ರವಿ ಅವರ ಆಕ್ಷೇಪಾರ್ಹ ಪದ ಬಳಕೆ ಆರೋಪ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, “ಆ ಸಮಯದಲ್ಲಿ ತಾನು ಪರಿಷತ್‌ನಲ್ಲಿ ಇರಲಿಲ್ಲ, ಅದರೆ ಶಾಸಕರು ಬಂದು ತಮಗೆ ವಿಷಯ ತಿಳಿಸಿದರು. ಈ ಘಟನೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತುಂಬಾ ನೊಂದುಕೊಂಡಿದ್ದಾರೆ. ಸಭಾಪತಿ ಮತ್ತು ಪೊಲೀಸರಿಗೂ ಅವರು ದೂರು ಸಲ್ಲಿಸಿದ್ದಾರೆ, ರವಿ ಅವರು ಬಳಸಿರುವ ಪದ ಬಳಕೆ ಕ್ರಿಮಿನಲ್ ಅಫೆನ್ಸ್ ಅನಿಸಿಕೊಳ್ಳುತ್ತದೆ” ಎಂದು ಹೇಳಿದರು.