EBM News Kannada
Leading News Portal in Kannada

ನಾಗಮಂಗಲ | ಕೋಟ್ಯಂತರ ರೂ. ಮೌಲ್ಯದ ತಿಮಿಂಗಲ ವಾಂತಿ ಜಪ್ತಿ ಆರೋಪಿಯ ಬಂಧನ | Nagamangala

0



ನಾಗಮಂಗಲ: ಪಟ್ಟಣದ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಕೋಟ್ಯಾಂತರ ರೂ. ಬೆಲೆಬಾಳುವ 3 ಕೆಜಿ ತಿಮಿಂಗಲ ವಾಂತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮೈಸೂರು ವಿಭಾಗ ವಲಯ ಅರಣ್ಯ ಇಲಾಖೆಯ ವಿಶೇಷ ತನಿಖಾ ತಂಡದವರು ಪಟ್ಟಣದ ಮೇಗಲಕೇರಿ ಬಡಗುಡಮ್ಮ ದೇವಸ್ಥಾನದ ಸಮೀಪದ ಮನೆಯ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮನೆ ಮಾಲಕ ವಿನಯ್‍ಕುಮಾರ್(31) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದು, ನಂತರ, ಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿದುಬಂದಿದೆ.

Leave A Reply

Your email address will not be published.