EBM News Kannada
Leading News Portal in Kannada

ʼಬೆಲ್ಲʼ ಸಕ್ಕರೆಗಳಿಗೂ ಪುಡಿಕಾಸಿನ ಬೆಲೆ ಸಿಗಬೇಕಾದರೆ ಸಂವಿಧಾನವೇ ಬೇಕು : ಅರವಿಂದ್ ಬೆಲ್ಲದ್‌ಗೆ ಬಿ.ಕೆ.ಹರಿಪ್ರಸಾದ್‌ ತಿರುಗೇಟು | BK Hariprasad

0


ಬೆಂಗಳೂರು : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೈಯಲ್ಲಿರುವುದು ಸಂವಿಧಾನ ಅಲ್ಲ, ಬೈಬಲ್ ಇದೆ ಎಂದು ಹೇಳಿದ್ದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ವಿರುದ್ಧ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರವಿಂದ್‌ ಬೆಲ್ಲದ್‌ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣ ʼಎಕ್ಸ್‌ʼನಲ್ಲಿ ಪ್ರತಿಕ್ರಿಯಿಸಿದ ಹರಿಪ್ರಸಾದ್‌ ಅವರು, “ಸಂವಿಧಾನದ ಪ್ರತಿಯನ್ನೂ ನೋಡದೆ, ಓದದೆ, ಒಪ್ಪದೆ, ಪರಿಪಾಲಿಸದೆ ಇರುವ ಪರಿವಾರ ಮತ್ತು ಬಿಜೆಪಿ ಸಂವಿಧಾನದ ರಕ್ಷಕರನ್ನು ಹೀಯಾಳಿಸುವುದು ಹೊಸತೇನಲ್ಲ. ರಾಹುಲ್ ಗಾಂಧಿ ಸಂವಿಧಾನದ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದಾರೆ. ಅವರನ್ನು ಜಾತಿ ಧರ್ಮದಿಂದ ನಿಂದಿಸಬಹುದು ಎಂದ ಭಾವಿಸಿದ್ದರೆ ಅದು ಬೆಲ್ಲದ್ ಅವರ ಮೂರ್ಖತನ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಈ ಬೆಲ್ಲದ್ ಅವರ ಪರಿವಾರದ ಪೂರ್ವಜರು ಸಂವಿಧಾನವನ್ನು ಒಪ್ಪುವ ಬದಲಾಗಿ, ಅದರ ವಿರುದ್ಧ ಹೋರಾಡಿದ್ದಾರೆ. ಆದರೆ ನಮ್ಮ ಪೂರ್ವಜರು ಸಂವಿಧಾನವನ್ನು ರಚಿಸಿದ್ದಾರೆ, ಅನುಷ್ಠಾನಗೊಳಿಸಿದ್ದಾರೆ, ಅದರ ರಕ್ಷಣೆಗೆ ಎದೆ ಕೊಟ್ಟು ನಿಂತಿದ್ದಾರೆ. ಈ ʼಬೆಲ್ಲʼ ಸಕ್ಕರೆಗಳಿಗೂ ಪುಡಿಕಾಸಿನ ಬೆಲೆ ಸಿಗಬೇಕಾದರೆ ಸಂವಿಧಾನವೇ ಇರಬೇಕೆ ಹೊರತು, ಮನುಸ್ಮೃತಿಯಲ್ಲ” ಎಂದು ಹೇಳಿದ್ದಾರೆ.



Leave A Reply

Your email address will not be published.