EBM News Kannada
Leading News Portal in Kannada

ಯಾದಗಿರಿ | ಸುರಪುರ ದೇವಸ್ಥಾನ ಬಳಿ ನವಜಾತ ಶಿಶು ಪತ್ತೆ | Yadagiri

0


ಯಾದಗಿರಿ : ಸುರಪುರ ನಗರದ ದಿವಳಗುಡ್ಡದ ಪಿಡ್ಡಣ್ಣ ಮುತ್ಯಾ ದೇವಸ್ಥಾನದ ಬಳಿ ನವಜಾತ ಶಿಶು ಪತ್ತೆಯಾಗಿದ್ದು, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಮಂಗಳವಾರ ರಾತ್ರಿ 2 ಗಂಟೆ ವೇಳೆಗೆ ಮಗು ಅಳುತ್ತಿರುವುದನ್ನು ಕೇಳಿ ಸ್ಥಳೀಯರು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ರಕ್ಷಣಾ ಘಟಕದ ರಾಜೇಂದ್ರ ಯಾದವ್ ಮತ್ತಿತರರು ಭೇಟಿ ನೀಡಿ, ಮಗುವನ್ನು ನಗರದ ತಾಲ್ಲೂಕು ಆಸ್ಪತ್ರೆಗೆ ಸೇರಿಸಿದ್ದಾರೆ.

ನಂತರ ಬುಧವಾರ ಮಧ್ಯಾಹ್ನ ಜಿಲ್ಲಾ ವಿಶೇಷ ದತ್ತು ಕೇಂದ್ರದ ಅಧಿಕಾರಿಗಳಿಗೆ ಮಗುವನ್ನು ಒಪ್ಪಿಸಲಾಗಿದ್ದು, ಮಗುವಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕಟಣೆ ಹೊರಡಿಸಿ ಮಗುವಿನ ಪೋಷಕರ ಪತ್ತೆಗೆ ಪ್ರಯತ್ನಿಸಲಾಗುವುದು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ರಕ್ಷಣಾಧಿಕಾರಿ ದಶರಥ ನಾಯಕ ತಿಳಿಸಿದ್ದಾರೆ.

60 ದಿನಗಳ ಕಾಲ ಮಗುವಿನ ಪೋಷಕರ ಪತ್ತೆಗೆ ಸಮಯವಿದ್ದು, ಯಾರೂ ಬರದಿದ್ದಲ್ಲಿ ಮಗುವನ್ನು ಜಿಲ್ಲಾ ವಿಶೇಷ ದತ್ತು ಕೇಂದ್ರಕ್ಕೆ ಸೇರಿಸಲಾಗುವುದು. ಈ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳ ರಕ್ಷಣಾ ಘಟಕದ ಸಂಯೋಜಕರಾದ ಭಾಗ್ಯಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಮಹಿಳಾ ಮೇಲ್ವೀಚಾರಕಿ ಸಾವಿತ್ರಿ ಗಾಳಿ, ಪೊಲೀಸ್ ಪೇದೆ ಪರಮೇಶ ಸೇರಿದಂತೆ ಮಹಿಳಾ ಪೊಲೀಸ್ ಪೇದೆಗಳು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಅನೇಕರಿದ್ದರು.

Leave A Reply

Your email address will not be published.