EBM News Kannada
Leading News Portal in Kannada

ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ಊಹಾಪೋಹ : ಸಚಿವ ಶರಣ ಪ್ರಕಾಶ್ ಪಾಟೀಲ್

0



ಕಲಬುರಗಿ : ʼರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ಊಹಾಪೋಹ. ಯಾರು ಯಾರನ್ನಾದರೂ ಭೇಟಿಯಾಗುವುದು ಬಿಡೋದು ಅವರ ವೈಯಕ್ತಿಕ ವಿಚಾರʼ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸತೀಶ್ ಜಾರಕಿಹೋಳಿ ಮೈಸೂರಿನಲ್ಲಿ ಸೌಜನ್ಯಯುತವಾಗಿ ಕೆಲ ನಾಯಕರನ್ನು ಭೇಟಿಯಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿಗೆ ಹೊಡೆತ ಎಂಬ ಶಾಸಕ ರಾಜು ಕಾಗೆ ಹೇಳಿಕೆ ವೈಯಕ್ತಿಕವಾಗಿದ್ದು, ಅದನ್ನು ವೈಭವಿಕರಿಸುವ ಅಗತ್ಯವಿಲ್ಲ” ಎಂದರು.

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದ ವಿಚಾರ ಪ್ರತಿಕ್ರಿಯಿಸಿದ ಅವರು, ʼಪ್ರಕರಣಗಳನ್ನು ವಾಪಸ್ ಪಡೆಯುವುದು ಸರಕಾರದ ಮಟ್ಟದಲ್ಲಿ ನಡೆಯುವ ಒಂದು ಪ್ರಕ್ರಿಯೆ. ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚೆ ನಡೆದ ಬಳಿಕ ಪ್ರಕರಣ ವಾಪಸ್ ಬಗ್ಗೆ ಸರಕಾರ ನಿರ್ಧರಿಸಿದೆ. ಸಂಬಂಧವಿಲ್ಲದ, ನಿರಪರಾಧಿಗಳ ಮೇಲಿನ ಪ್ರಕರಣ ವಾಪಸ್ ಪಡೆಯಲಾಗಿದೆʼ ಎಂದರು.

ಗಲಭೆಯಲ್ಲಿ ಸಾಕಷ್ಟು ಮಂದಿ ಅಮಾಯಕರು ಸಿಲುಕಿಕೊಂಡಿದ್ದರು. ಅಂತವರ ಮೇಲೆ ಸಹ ಆ ಸಂದರ್ಭದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹುಬ್ಬಳ್ಳಿ ಗಲಭೆ ಪ್ರಕರಣ ಒಂದೇ ಅಲ್ಲ, ವಿವಿಧ ಪ್ರಕರಣಗಳ 43 ಕೇಸ್‌ಗಳನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.

Leave A Reply

Your email address will not be published.