EBM News Kannada
Leading News Portal in Kannada

ಮುಡಾ ಪ್ರಕರಣ | ವಿಚಾರಣೆಗೆ ಹಾಜರಾಗಲು ಸ್ನೇಹಮಯಿ ಕೃಷ್ಣಗೆ ಈಡಿ ನೋಟಿಸ್

0



ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು ನೋಟಿಸ್ ನೀಡಿದ್ದಾರೆಂದು ಗೊತ್ತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ಸಂಬಂಧ ಸಾಕ್ಷ್ಯಾಧಾರ ಮತ್ತು ಅಗತ್ಯ ದಾಖಲೆ ಸಲ್ಲಿಸಲು ಈಡಿ ಸಮನ್ಸ್ ನೀಡಿದೆ. ನಾಳೆ(ಅ.3) ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ(ಈಡಿ) ಕಚೇರಿಗೆ ಮುಡಾ ಪ್ರಕರಣ ಸಂಬಂಧದ ಎಲ್ಲ ದಾಖಲೆಗಳ ಸಮೇತ ಆಗಮಿಸಲು ನಿರ್ದೇಶನ ನೀಡಲಾಗಿದೆ.

ಸೆ.28ರಂದು ಸ್ನೇಹಮಯಿ ಕೃಷ್ಣ ‘ಮುಡಾ’ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲಕ ದೇವರಾಜು ವಿರುದ್ಧ ಈಡಿಗೆ ದೂರು ನೀಡಿದ್ದರು. ಸೆ.30ರಂದು ಈಡಿ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಇಸಿಐಆರ್ ದಾಖಲಿಸಿಕೊಂಡಿತ್ತು. ಈ ಮಧ್ಯೆ ಸಿಎಂ ಪತ್ನಿ ಪಾರ್ವತಿ ಅವರು ಮುಡಾ ತಮಗೆ ಮಂಜೂರು ಮಾಡಿದ್ದ 14 ನಿವೇಶನಗಳನ್ನು ಹಿಂದಿರುಗಿದ್ದಾರೆ.

Leave A Reply

Your email address will not be published.