ಬಿ.ಸಿ.ರೊಡ್, ಆ. 15: ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಸಮಿತಿ ವತಿಯಿಂದ 77 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಮತ್ತು ಸಂದೇಶ ಕಾರ್ಯಕ್ರಮವು ಜಿಲ್ಲಾ ಕಚೇರಿ ವಠಾರದಲ್ಲಿ ಇರ್ಶಾದ್ ದಾರಿಮಿ ಮಿತ್ತಬೈಲ್ ನೇತೃದ್ವದಲ್ಲಿ ಜರಗಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸಂದೇಶ ಭಾಷಣಗೈದರು. ಜಿಲ್ಲಾ ಆರ್ಗನೇಝಿಂಗ್ ಕಾರ್ಯದರ್ಶಿ ಮುಸ್ತಫ ಕಟ್ಟದಪಡ್ಪು ಸ್ವಾಗತಿಸಿದರು. ಇರ್ಶಾದ್ ದಾರಿಮಿ ಮಿತ್ತಬೈಲ್ ಧ್ವಜಾರೋಹಣಗೈದರು.
ಜಿಲ್ಲಾ ಫೈಝೀಸ್ ಉಪಾಧ್ಯಕ್ಷ ಲತೀಫ್ ಫೈಝಿ ಕರಾಯ,ಮಿತ್ತಬೈಲ್ SKSSF ಕ್ಲಸ್ಟರ್ ಅಧ್ಯಕ್ಷ ಅಶ್ರಫ್ ಮಿತ್ತಬೈಲ್, ಕಾರ್ಯದರ್ಶಿ ಕಲಂದರ್ ತುಂಬೆ,ಮಿತ್ತಬೈಲ್ ಜಮಾಅತ್ ಮಾಜಿ ಅಧ್ಯಕ್ಷ ಮುಹಮ್ಮದ್ ಸಾಗರ್,ಅರಫಾ ಮಸೀದಿ ಅಧ್ಯಕ್ಷ ಅಬ್ದುಲ್ ಕಾದಿರ್,ಡಿ ಪಿ ಸ್ಟೋರ್ ಮಾಲಕ ಸಿದ್ದೀಕ್ ಹಾಜಿ,ಅಲ್ತಾಫ್ ಮಿತ್ತಬೈಲ್ ,SKSSF ಬಂಟ್ವಾಳ ವಿಖಾಯ ಚೇರ್ಮಾನ್ ಅರ್ಶದ್ ಸಹಿತ ಹಲವಾರು ಉಪಸ್ಥಿತರಿದ್ದರು.