EBM News Kannada
Leading News Portal in Kannada

ಬೆಂಗಳೂರು: ಪತಿಯ ಬಣ್ಣ ಕಪ್ಪೆಂದು ಅವಹೇಳನ ಮಾಡಿದ ಪತ್ನಿಗೆ ವಿಚ್ಛೇದನ ದಯಪಾಲಿಸಿದ ಹೈಕೋರ್ಟ್! – Kannada News | Bengaluru: Karnataka High Court granted divorce to the wife who insulted her husband for being black

0


Karnataka High Court Veridict; 2017 ರ ಅಕ್ಟೋಬರ್​​ನಲ್ಲಿ, ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಕುಟುಂಬದಲ್ಲಿ ನೋವು-ನಲಿವು ಸಾಮಾನ್ಯ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಆ ತೀರ್ಪನ್ನು ಪ್ರಶ್ನಿಸಿದ್ದ ಪತಿ, ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್​ ವಿಚ್ಛೇದನ ನೀಡಿದೆ.

ಬೆಂಗಳೂರು: ಪತಿಯ ಬಣ್ಣ ಕಪ್ಪೆಂದು ಅವಹೇಳನ ಮಾಡಿದ ಪತ್ನಿಗೆ ವಿಚ್ಛೇದನ ದಯಪಾಲಿಸಿದ ಹೈಕೋರ್ಟ್!

ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಿಳೆಯೊಬ್ಬರು ಪತಿಯ ಚರ್ಮದ ಬಣ್ಣ ಕಪ್ಪು ಎಂದು ಪದೇ ಪದೇ ಅವಹೇಳನ ಮಾಡುವುದು, ಅದೇ ಕಾರಣಕ್ಕೆ ಆತನನ್ನು ಬಿಟ್ಟು ಹೋಗುವುದು ಮತ್ತು ಆತನ ವಿರುದ್ಧ ಅಕ್ರಮ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ. ಜತೆಗೆ, ದಂಪತಿಗೆ ವಿಚ್ಛೇದನ ನೀಡಿದೆ. 2007 ರ ನವೆಂಬರ್ 15 ರಂದು ವಿವಾಹವಾದ ದಂಪತಿಗೆ ಹೆಣ್ಣು ಮಗುವಿದೆ. ಮಗುವಿಗೆ ಮೂರೂವರೆ ವರ್ಷ ವಯಸ್ಸಾಗಿದ್ದಾಗ ಅವರು 2012 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ಕಪ್ಪಗಿರುವ ಕಾರಣ ಹೆಂಡತಿ ತನ್ನನ್ನು ಅವಮಾನಿಸುತ್ತಿದ್ದಳು. ಆದರೆ, ಮಗುವಿನ ಭವಿಷ್ಯದ ಸಲುವಾಗಿ ಮಾತ್ರ ಅವಮಾನವನ್ನು ಸಹಿಸಿಕೊಳ್ಳುತ್ತಿದ್ದೆ ಎಂದು ಸಂತ್ರಸ್ತ ಪತಿ ಹೇಳಿದ್ದಾರೆ. 2011 ರ ಅಕ್ಟೋಬರ್ 29 ರಂದು, ಪತ್ನಿ ಬಾಣಸವಾಡಿ ಪೊಲೀಸ್ ಠಾಣೆಗೆ ಹೋಗಿ ತನ್ನ ಮತ್ತು ವೃದ್ಧ ತಾಯಿ ಸೇರಿದಂತೆ ಕುಟುಂಬ ಸದಸ್ಯರ ವಿರುದ್ಧ ದೂರು ನೀಡಿದ್ದಳು. ಅದರ ಆಧಾರದಲ್ಲಿ ಐಪಿಸಿ ಸೆಕ್ಷನ್ 498A (ಕ್ರೌರ್ಯಕ್ಕೆ ಎಸಗುವುದಕ್ಕೆ ಸಂಬಂಧಿಸಿದ್ದು) ಅಡಿಯಲ್ಲಿ ದೂರು ದಾಖಲಿಸಲಾಗಿತ್ತು. ನಂತರ ಪೊಲೀಸರು ತನ್ನನ್ನು ಹಲವಾರು ದಿನಗಳವರೆಗೆ ಠಾಣೆಗೆ ಕರೆಸಿಕೊಂಡಿದ್ದರು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ತಾನು ಜಾಮೀನು ಪಡೆಯಬೇಕಾಯಿತು ಎಂದು ಅವರು ಆರೋಪಿಸಿದ್ದಾರೆ.

ಬಳಿಕ ಸಂತ್ರಸ್ತ ಪತಿಯು ಪತ್ನಿಯಿಂದ ತನಗೆ ಹಾಗೂ ಕುಟುಂಬಸ್ಥರಿಗೆ ಉಂಟಾಗಿರುವ ಮಾನಸಿಕ ವ್ಯಥೆಯ ಕಾರಣವೊಡ್ಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಖಾಸಗಿ ಕಂಪನಿಯೊಂದರಲ್ಲಿ ದುಡಿದು ಬಂದ ಹಣವನ್ನೆಲ್ಲ ಕೊಡುತ್ತಿದ್ದರೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪತ್ನಿ ಹೇಳಿಕೊಂಡಿದ್ದಾಳೆ. ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದು, ಮದುವೆಯ ನಂತರವೂ ಅದನ್ನು ಮುಂದುವರಿಸಿದ್ದಾರೆ ಪತ್ನಿ ದೂರುತ್ತಿದ್ದಾಳೆ ಎಂದು ಅವರು ವಾದಿಸಿದ್ದರು.

2017 ರ ಅಕ್ಟೋಬರ್​​ನಲ್ಲಿ, ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿತ್ತು. ಕುಟುಂಬದಲ್ಲಿ ನೋವು-ನಲಿವು ಸಾಮಾನ್ಯ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಆ ತೀರ್ಪನ್ನು ಪತಿ ಪ್ರಶ್ನಿಸಿದರು. ದಾಖಲೆಗಳನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿಗಳಾದ ಅಲೋಕ್ ಆರಾಧೆ (ಈಗ ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ) ಮತ್ತು ಅನಂತ್ ರಾಮನಾಥ್ ಹೆಗ್ಡೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ಸಾಕ್ಷ್ಯಗಳನ್ನು ಸರಿಯಾಗಿ ಗ್ರಹಿಸುವ ಕುಟುಂಬ ನ್ಯಾಯಾಲಯ ವಿಫಲವಾಗಿದೆ ಎಂದು ಹೇಳಿತು. ಮುಂದುವರಿದು, ‘ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ಜತೆಗಿನ ಹಲವು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಳೆದ ಹಲವು ವರ್ಷಗಳಿಂದ ಪತಿ–ಪತ್ನಿಯರ ನಡುವೆ ಯಾವುದೇ ಸಂಪರ್ಕವಿಲ್ಲ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ’ ಎಂದು ಪೀಠ ಹೇಳಿದೆ.

ಬಳಿಕ, ಪತಿಯೊಂದಿಗೆ ಜೀವನ ಮಾಡಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಯನ್ನು ಮಹಿಳೆಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ಮಹಿಳೆ, ಪತಿ ಹಾಗೂ ಆತನ ಕುಟುಂಬದವರೊಂದಿಗೆ ವಾಸಿಸಲು ಸಿದ್ಧಳಿದ್ದೇನೆ. ಆದರೆ ಅವರ ವಿರುದ್ಧ ದಾಖಲಿಸಿರುವ ದೂರುಗಳನ್ನು ಹಿಂಪಡೆಯಲು ತಯಾರಿಲ್ಲ ಎಂದು ಹೇಳಿದ್ದಾರೆ.

ಈ ಅಂಶವು ಪತ್ನಿಯು ಪತಿಯೊಂದಿಗೆ ಸೇರಲು ಸಿದ್ಧರಿಲ್ಲ ಮತ್ತು ಪತಿ-ಪತ್ನಿಯರ ನಡುವೆ ದೊಡ್ಡ ಬಿರುಕು ಇದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ ಎಂದು ಪೀಠವು ಹೇಳಿದೆ. ಹೀಗಾಗಿ ವಿಚ್ಛೇದನ ನೀಡಿದೆ ಎಂದು ‘ಟೈಮ್ಸ್ ಆಫ್​ ಇಂಡಿಯಾ’ ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ

Leave A Reply

Your email address will not be published.