EBM News Kannada
Leading News Portal in Kannada

ಕೊಪ್ಪಳ ಜಿಲ್ಲಾಧಿಕಾರಿ ಹೆಸರಿನಲ್ಲಿ ಫೇಸ್‌ಬುಕ್‌ ನಕಲಿ ಖಾತೆ ಸೃಷ್ಟಿ – Kannada News | Created a fake Facebook account in the name of Koppal District Collector

0


ಕೊಪ್ಪಳ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರ ಹೆಸರಲ್ಲಿ ಖದೀಮರು ಫೇಸ್​ಬುಕ್​ನಲ್ಲಿ ಫೇಕ್​ ಅಕೌಂಟ್​ ಸೃಷ್ಟಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಕೊಪ್ಪಳ: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ನಕಲಿ ಖಾತೆಗಳ (Fake Account) ಹಾವಳಿ ಜಾಸ್ತಿಯಾಗಿದೆ. ಫೇಕ್​ ಅಕೌಂಟ್​ ಮೂಲಕ ಬ್ಯ್ಲಾಕ್​ ಮೇಲ್​​, ತೇಜೊವಧೆ, ಹಣ ಕೇಳುವುದು ಹಾಗೂ ದೇಶದ್ರೋಹದಂತ ಚಟುವಟಿಕೆಗಳು ನಡೆಯುತ್ತಿವೆ. ಇದನ್ನು ತಡೆಗಟ್ಟಲು ರಾಜ್ಯ ಪೊಲೀಸರು (Police) ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೆ ಇಲ್ಲಿಯ ಕೆಲವರು ಜಿಲ್ಲಾಧಿಕಾರಿಯ ಹೆಸರಲ್ಲಿ ನಕಲಿ ಫೇಸ್​ಬುಕ್​ ಅಕೌಂಟ್​​ ತೆರದಿದ್ದಾರೆ. ಹೌದು ಕೊಪ್ಪಳ (Koppal) ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಅವರ ಹೆಸರಲ್ಲಿ ಕೆಲವರು ಫೇಸ್​ಬುಕ್​ನಲ್ಲಿ ಫೇಕ್​ ಅಕೌಂಟ್​ ಸೃಷ್ಟಿಸಿದ್ದಾರೆ.

ಈ ಫೇಕ್​ ಅಕಂಟ್​ಗೆ ಜಿಲ್ಲಾಧಿಕಾರಿಗಳ ಭಾವಚಿತ್ರ ಡಿಪಿ ಇಟ್ಟು ಫ್ರೆಂಡ್ ರಿಕ್ವೆಸ್ಟ್​​​ ಕಳಿಸುತ್ತಿದ್ದರು. ಈ ವಿಚಾರ ತಿಳಿದ ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ನನ್ನ ಹೆಸರಿನಲ್ಲಿ ನಕಲಿ ಫೇಸ್​​​ಬುಕ್​ ಖಾತೆ ಸೃಷ್ಟಿಸಿ ವಂಚಿಸಲು ಯತ್ನಿಸುತ್ತಿದ್ದಾರೆ. ಈ ಫೇಕ್ ಸಂದೇಶಕ್ಕೆ ಯಾರೂ ಕೂಡ ಪ್ರತಿಕ್ರಿಯೆ ನೀಡಬಾರದೆಂದು ಅಧಿಕೃತ ಫೇಸ್‌ಬುಕ್​​ ಮೂಲಕ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Leave A Reply

Your email address will not be published.